
ಪಾಟ್ನಾ: ಜಾರ್ಖಂಡ್ ರಾಜ್ಯ ಸ್ಥಾಪನೆಗೊಂಡ ಪ್ರಾಂಭದಿಂದಲೂ ರಾಜ್ಯದ ಮುಖ್ಯಮಂತ್ರಿ ಹುದ್ದೆಯ ಚುಕ್ಕಾಣಿ ಹಿಡಿಯುತ್ತಿರುವ ಬುಡಕಟ್ಟಿನ ವ್ಯಕ್ತಿಯ ಸಂಪ್ರದಾಯವನ್ನು ಮುರಿದು ಆದಿವಾಸಿ ಜನಾಂಗಕ್ಕೆ ಸೇರದ ರಘುಬರ್ ದಾಸ್ ಅವರನ್ನು ನೇಮಕ ಮಾಡಿರುವುದಕ್ಕೆ ಜೆಡಿಯು ಮುಖಂಡ ನಿತೀಶ್ ಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಆದಿವಾಸಿಯಲ್ಲದ ಒಬ್ಬ ವ್ಯಕ್ತಿಯನ್ನು ಜಾರ್ಖಂಡ್ ಮುಖ್ಯಮಂತ್ರಿಯಾಗಿ ನೇಮಕ ಮಾಡಿ ಈ ಹಿಂದಿನ ಸಂಪ್ರದಾಯವನ್ನು ಮುರಿದಿರುವುದಲ್ಲದೆ, ಬುಡಕಟ್ಟು ಜನರ ಮೇಲೆ ನಮಗೆ ವಿಶ್ವಾಸವಿಲ್ಲ ಎಂಬ ಸಂದೇಶ ಬಿಜೆಪಿ ಕಳುಹಿಸಿದೆ ಎಂದಿದ್ದಾರೆ.
ಆದಿವಾಸಿ ಜನರ ಅಭಿಲಾಷೆಗಳನ್ನು ಪೂರೈಸಲೇ ಜಾರ್ಖಂಡ್ ರಾಜ್ಯವನ್ನು ಸ್ಥಾಪಿಸಿದ್ದು ಹಾಗು ಇದಕ್ಕಾಗಿ ಬುಡಕಟ್ಟು ಜನರ ಭಾವನೆಗಳನ್ನು ಗೌರವಿಸಲು ಇಲ್ಲಿಯವರೆಗೆ ಬುಡಕಟ್ಟು ಮೂಲದ ವ್ಯಕ್ತಿಯನ್ನೇ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುತ್ತಿದ್ದುದು" ಎಂದು ನಿತೀಶ್ ಕುಮಾರ್ ತಿಳಿಸಿದ್ದಾರೆ.
ಈ ನಡೆ ಬುಡಕಟ್ಟು ಜನರಲ್ಲಿ ಅಸಮಧಾನ ಸೃಷ್ಟಿಸಲಿದ್ದು ಇದು ಬುಡಕಟ್ಟು ಜನರು ಮತ್ತು ಇತರ ಜನರ ಮಧ್ಯೆ ಅಸಮಾಧಾನ ಸೃಷ್ಟಿಸಲು ಕೇಸರಿ ಪಕ್ಷ ರಾಜಕೀಯ ಮಾಡುತ್ತಿದೆ ಎಂದು ದೂರಿದ್ದಾರೆ.
Advertisement