ಎರಡು ದಶಕದ ನಂತರ ಹಿಂದಿರುಗಲಿದೆ ೧ ರೂ ನೋಟು

ಒಂದು ರುಪಾಯಿಗೆ ಏನು ಬರುತ್ತದೆ
೧ ರುಪಾಯಿಯ ಹಳೆಯ ನೋಟು
೧ ರುಪಾಯಿಯ ಹಳೆಯ ನೋಟು

ನವದೆಹಲಿ: ಒಂದು ರುಪಾಯಿಗೆ ಏನು ಬರುತ್ತದೆ ಎಂದು ಜನ ಮೂಗು ಮುರಿಯುವ ಸಮಯದಲ್ಲಿ, ಭಾರತ ಸರ್ಕಾರ ಎರಡು ದಶಕಗಳ ನಂತರ ಒಂದು ರುಪಾಯಿ ನೋಟುಗಳನ್ನು ಮುದ್ರಿಸಲು ಮುಂದಾಗಿದೆ.

ಜನವರಿ ೦೧ ೨೦೧೫ ರಿಂದ ಈ ಮುದ್ರಿತ ೧ ರುಪಾಯಿ ನೋಟುಗಳು ಮತ್ತೆ ಚಲಾವಣೆಗೆ ಬರಲಿವೆ ಎಂದು ಸರ್ಕಾರ ತಿಳಿಸಿದೆ. ಈ ನೋಟುಗಳನ್ನು ಮುದ್ರಿಸಲು ತಗಲುತ್ತಿದ್ದ ದುಬಾರಿ ವಚ್ಚವನ್ನು ತಡೆಯಲು ಹಾಗೂ ಹೆಚ್ಚಿನ ಮೊತ್ತದ ನೋಟುಗಳನ್ನು ಮುದ್ರಿಸಲು ಪ್ರಿಂಟರ್ ಗಳನ್ನು ತೆರವುಗೊಳಿಸಲು ನವೆಂಬರ್ ೧೯೯೪ ರಲ್ಲಿ ೧ ರುಪಾಯಿ ನೋಟುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿತ್ತು. ನಂತರದ ವರ್ಷಗಳಲ್ಲಿ ೨ ರೂ ಮತ್ತು ೫ ರೂ ನೋಟುಗಳನ್ನು ಕೂಡ ನಿಲ್ಲಿಸಲಾಗಿತ್ತು.

ಉಳಿದೆಲ್ಲಾ ನೋಟುಗಳ ಮೇಲೆ ಆರ್ ಬಿ ಐ ಗವರ್ನರ್ ನ ಸಹಿ ಇದ್ದಾರೆ, ಒಂದು ರೂ ನೋಟುಗಳಲ್ಲಿ ಸರ್ಕಾರದ ಹಣಕಾಸು ಕಾರ್ಯದರ್ಶಿಯ ಸಹಿ ಇರುತ್ತದೆ. ಏಕೆಂದರೆ ಉಳಿದೆಲ್ಲಾ ನೋಟುಗಳನ್ನು ಆರ್ ಬಿ ಐ ಚಲಾವಣೆಗೆ ತಂದರೆ, ಒಂದು ರೂ ನೋಟುಗಳನ್ನು ಚಲಾವಣೆಗೆ ತರುವುದು ಭಾರತ ಸರ್ಕಾರ.

ಈ ಯೋಜನೆಯಡಿ, ಎಷ್ಟು ಮೌಲ್ಯದ ನೋಟುಗಳನ್ನು ಸರ್ಕಾರ ಮುದ್ರಿಸುತ್ತಿದೆ ಎಂಬುದನ್ನ ಸರ್ಕಾರ ತಿಳಿಸಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com