ಹ್ಯಾಕಿಂಗ್ ವಿವಾದ: ಒಬಾಮ ಕೋತಿ ಎಂದ ಉತ್ತರ ಕೊರಿಯಾ

ಹಾಸ್ಯ-ವ್ಯಂಗ್ಯ ಸಿನೆಮಾ 'ದಿ ಇಂಟರ್ ವ್ಯೂ' ಚಲನಚಿತ್ರದ ಹ್ಯಾಕಿಂಗ್ ವಿವಾದದದ ...
ಬರಾಕ್ ಒಬಾಮಾ (ಸಂಗ್ರಹ ಚಿತ್ರ)
ಬರಾಕ್ ಒಬಾಮಾ (ಸಂಗ್ರಹ ಚಿತ್ರ)

ಸಿಯೋಲ್: ಹಾಸ್ಯ-ವ್ಯಂಗ್ಯ ಸಿನೆಮಾ 'ದಿ ಇಂಟರ್ ವ್ಯೂ' ಚಲನಚಿತ್ರದ ಹ್ಯಾಕಿಂಗ್ ವಿವಾದದದ ಹಿನ್ನಲೆಯಲ್ಲಿ, ಉತ್ತರ ಕೊರಿಯಾದ ಅಂತರ್ಜಾಲ ವ್ಯವಸ್ಥೆಯನ್ನು ಸ್ಥಗಿತಗೊಳಿಸಿದ್ದಕ್ಕೆ ಅಮೇರಿಕಾವನ್ನು ದೂಷಿಸಿ, ಯು ಎಸ್ ಎ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಕೋತಿ ಎಂದು ಉತ್ತರ ಕೊರಿಯಾ ಜರಿದಿದೆ.

ಚಿತ್ರ ನಿರ್ಮಾಣ ಸಂಸ್ಥೆ ಸೋನಿ ಪಿಕ್ಚರ್ಸ್ ಮೇಲೆ ನಡೆದ ಸೈಬರ್ ಅಟ್ಯಾಕ್ ದಾಳಿಯಲ್ಲಿ ತನ್ನ ಭಾಗಿತ್ವವನ್ನು ನಿರಾಕರಿಸಿರುವ ಉತ್ತರ ಕೊರಿಯಾ, ಆದರೆ ದೇಶದ ಸರ್ವಾಧಿಕಾರಿ ಕಿಮ್ ಜಾಂಗ್ ಅನ್ ಅವರ ಹತ್ಯೆಯನ್ನು ಚಿತ್ರಿಸುವ ಸಿನೆಮಾ 'ದಿ ಇಂಟರ್ ವ್ಯೂ' ವಿರುದ್ಧ ಕಿಡಿ ಕಾರಿದೆ. ಸಿನೆಮಾ ಬಿಡುಗಡೆಯನ್ನು ರದ್ದುಗೊಳಿಸಿರುವುದಾಗಿ ಘೋಷಿಸಿದ್ದ ಸೋನಿ, ಒಬಾಮ ಅವರ ಟೀಕೆಯ ನಂತರ ಈ ವಾರ ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು.

ಉತ್ತರ ಕೊರಿಯಾದ ಅತ್ಯುನ್ನತ ಆಡಳಿತ ಸಂಸ್ಥೆ ಕಿಮ್ ನಾಯಕತ್ವದ ರಾಷ್ಟ್ರೀಯ ಭದ್ರತಾ ಸಮಿತಿ, ಚಿತ್ರ ಬಿಡುಗಡೆಗೆ ಶನಿವಾರ ಒಬಾಮ ಅವರನ್ನು ದೂಷಿಸಿದೆ. "'ದಿ ಇಂಟರ್ ವ್ಯೂ' ಸಿನೆಮಾ ಕಾನೂನು ಬಾಹಿರ, ಅಪ್ರಾಮಾಣಿಕ ಹಾಗೂ ಪ್ರತಿಗಾಮಿ. ಒಬಾಮಾ ಉಷ್ಣವಲಯದ ಕಾಡುಗಳ ಕೋತಿಯ ಹಾಗೆ, ಅಜಾಗರೂಕತೆಯ ಮಾತುಗಳನ್ನಾಡುತ್ತಾರೆ" ಎಂದು ಪತ್ರಿಕಾ ಹೇಳಿಕೆಯಲ್ಲಿ ಉತ್ತರ ಕೊರಿಯಾದ ಸರ್ಕಾರದ ನೀತಿನಿರ್ವಹಣ ಸಂಸ್ಥೆ ತಿಳಿಸಿದೆ.

ಶನಿವಾರ ವೈಟ್ ಹೌಸ್ ನಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com