
ನವದೆಹಲಿ: ಸಂಘ ಪರಿವಾರದ ಹಿಂದುತ್ವ ಅಜೆಂಡಾದಿಂದ ದೇಶದಲ್ಲಿ ಹೆಚ್ಚಿರುವ ಉದ್ವೇಗದ ನಡುವೆ, ನಂಬಿಕೆ ಮತ್ತು ಇತಿಹಾಸವನ್ನು ಬೆಸೆಯುವುದು ಸರಿಯಾದ ನಡೆಯಲ್ಲ ಎಂದು ಎಚ್ಚರಿಸಿರುವ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ದೇಶಲ್ಲಿ ೪೬೦೦ ಬಗೆಯ ಸಮುದಾಯಗಳು ಇರುವಾಗ, "ಏಕರೂಪ" ರಾಷ್ಟ್ರದ ಕಲ್ಪನೆಯ ಪ್ರಚಾರ ಅಪಾಯಕಾರಿ ಎಂದಿದ್ದಾರೆ.
"ಭಾರತದ ಮಾನವಶಾಸ್ತ್ರ ಸರ್ವೇಕ್ಷಣೆಯ ಪ್ರಕಾರ ನಮ್ಮಲ್ಲಿ ೪೬೩೫ ಸಮುದಾಯಗಳಿವೆ. ಆದುದರಿಂದ ಏಕರೂಪ ರಾಷ್ಟ್ರವನ್ನು ಕಟ್ಟುತ್ತೇವೆ ಎಂದು ಹೇಳುವಾಗ ಎಚ್ಚರಿಕೆಯಿಂದರಬೇಕು" ಎಂದು ೭೫ನೆ ಭಾರತೀಯ ಇತಿಹಾಸ ಕಾಂಗ್ರೆಸ್ ಉದ್ಘಾಟನಾ ಸಮಯದಲ್ಲಿ ಅನ್ಸಾರಿ ಹೇಳಿದ್ದಾರೆ.
ಇತಿಹಾಸವನ್ನು ನಂಬಿಕೆ ಆಧಾರದ ಮೇಲೆ ಸೃಷ್ಟಿಸಲು ಸಾಧ್ಯವಿಲ್ಲ ಎಂದಿರುವ ಹಮೀದ್ ಅನ್ಸಾರಿ, ಭಾರತದ ವೈವಿಧ್ಯತೆ ಆರು ದಶಕಗಳಿಂದ ಹಲವಾರು ದಾಳಿಗಳನ್ನು ತಡೆದುಕೊಂಡಿದೆ ಎಂದಿದ್ದಾರೆ.
Advertisement