ಕಾಣೆಯಾದ ಏರ್ ಏಷಿಯಾ ವಿಮಾನ ಸಮುದ್ರದ ತಳದಲ್ಲಿ?

ಇಂಡೋನೇಶಿಯಾದಿಂದ ಸಿಂಗಾಪುರಕ್ಕೆ ಹೊರಟಿದ್ದ ಏರ್ ಏಶಿಯಾ ವಿಮಾನ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಸುರಬಯ: ಇಂಡೋನೇಶಿಯಾದಿಂದ ಸಿಂಗಾಪುರಕ್ಕೆ ಹೊರಟಿದ್ದ ಏರ್ ಏಶಿಯಾ ವಿಮಾನ ಇದ್ದ ೧೬೨ ಪ್ರಯಾಣಿಕರೊಂದಿಗೆ ಭಾನುವಾರ ಕಾಣೆಯಾಗಿ ೨೪ ಘಂಟೆಗಳು ಕಳೆದಿದ್ದು, ವಿವಿಧ ದೇಶಗಳ ವಿಮಾನಗಳು ಮತ್ತು ಹಡಗುಗಳು ಹುಡುಕುವ ಕಾರ್ಯಾಚರಣೆಯನ್ನು ಚುರುಕುಗೊಳಿಸಿವೆ.

ಕಾಣೆಯಾಗುವ ಮುಂಚೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಈ ವಿಮಾನ ಸ್ಫೋಟಿಸಿ, ಸಮುದ್ರದ ತಳದಲ್ಲಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ ಎಂದು ಈ ವಿಮಾನದ ಶೋಧ ದಳದ ಮುಖ್ಯಸ್ಥ ತಿಳಿಸಿದ್ದಾರೆ.

ನೆನ್ನೆ ಶೋಧ ಕಾರ್ಯಾಚರಣೆಗೆ ಹವಾಮಾನ ಪರಿಸ್ಥಿತಿ ಅಡ್ಡ ಬಂದಿದ್ದು, ಮತ್ತೆ ಶೋಧ ಕಾರ್ಯಾಚರಣೆ ಈಗ ಚುರುಕುಗೊಂಡಿದೆ. ೧೨ ನೌಕಾಪಡೆಯ ಹಡಗುಗಳು, ೫ ವಿಮಾನಗಳು, ೩ ಹೆಲಿಕಾಪ್ಟರ್ ಗಳು ಮತ್ತು ಹಲವಾರು ದೇಶದ ನೌಕಾ ಹಡಗುಗಳು ಶೋಧ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಸುರಬಯ ವಾಯುಪಡೆಯ ಅಡ್ಮಿರಲ್ ಸಿಗಿತ್ ಸೇಥಿಯಾನ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com