ಮೋದಿ ಮತ್ತು ರೇಖಾ 'ಭಾರತದ ಶಾಕಾಹಾರಿ ಸೆಲೆಬ್ರಿಟಿಗಳು'!
ನವದೆಹಲಿ: ಪ್ರಾಣಿ ದಯಾಪರ ಸಂಘ (ಪೇಟಾ) ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಲಿವುಡ್ ಖ್ಯಾತ ನಟಿ ರೇಖಾ ಅವರನ್ನು ಭಾರತದ ಹಾಟೆಸ್ಟ್ ಶಾಕಾಹಾರಿ ಸೆಲೆಬ್ರಿಟಿಗಳೆಂದು ಘೋಷಿಸಿದೆ.
ನಾನು ಶಾಕಾಹಾರಿಯಾಗಿಯೇ ಬದುಕಿದ್ದೇನೆ. ಇದು ನನ್ನ ಜೀವನಕ್ಕೆ ಸಹಕಾರಿಯಾಗಿದ್ದು, ಶಾಕಾಹಾರ ಆಹಾರ ಪದ್ಧತಿಯನ್ನು ನಾನು ಪ್ರೋತ್ಸಾಹಿಸುತ್ತಿದ್ದೇನೆ ಎಂದು ರೇಖಾ ಹೇಳಿದ್ದಾರೆ.
ಆದಾಗ್ಯೂ, ಪ್ರಧಾನಿ ನರೇಂದ್ರ ಮೋದಿ ದೇಹ ಆರೋಗ್ಯವಾಗಿರಲು ಯೋಗಾಭ್ಯಾಸ ಮಾಡುತ್ತಾರೆ. ಮಾತ್ರವಲ್ಲದೆ ವಿದೇಶ ಯಾತ್ರೆ ಕೈಗೊಂಡಾಗಲೂ ಅಲ್ಲಿ ಶಾಕಾಹಾರವನ್ನು ಮಾತ್ರ ಸೇವಿಸುತ್ತಾರೆ.
ರೇಖಾ ಮತ್ತು ಪ್ರಧಾನಿ ಮೋದಿ, ಶಾಕಾಹಾರವನ್ನು ಸೇವಿಸುವ ಮೂಲಕ ಜನರಿಗೆ ಮಾದರಿಯಾಗಿದ್ದಾರೆ. ಭಾರತದಲ್ಲಿ ಪೇಟಾ ಶಾಕಾಹಾರಿ ಸೆಲಿಬ್ರಿಟಿ ಎಂದು ಘೋಷಿಸಿರುವ ಈ ವ್ಯಕ್ತಿಗಳು ಊಟಕ್ಕಾಗಿ ಕುಳಿತುಕೊಳ್ಳುವ ವೇಳೆ ಕರುಣೆ ಎಂಬುದು ಎಲ್ಲದಕ್ಕಿಂತಲೂ ಮಿಗಿಲು ಎಂಬುದನ್ನು ತೋರಿಸುತ್ತಾರೆ ಎಂದು ಪೇಟಾ ಇಂಡಿಯಾದ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಪೂರ್ವ ಜೋಷಿಪುರ ಹೇಳಿದ್ದಾರೆ.
ನಟ-ನಟಿಯರಾದ ಕಂಗನಾ ರಣಾವತ್, ಶಾಹಿದ್ ಕಪೂರ್, ಅಮಿತಾಬ್ ಬಚ್ಚನ್, ಆರ್. ಮಾಧವನ್, ಜಾಕ್ವಲಿನ್ ಫರ್ನಾಂಡಿಸ್ ಮತ್ತು ಹೇಮಾ ಮಾಲಿನಿ ಮೊದಲಾದವರ ಹೆಸರನ್ನು ಕೂಡಾ ಪೇಟಾ ಶಾಕಾಹಾರಿ ಸೆಲಿಬ್ರಿಟಿ ಸ್ಪರ್ಧೆಗೆ ಪರಿಗಣಿಸಲಾಗಿತ್ತು. ಸಿಲೆಬ್ರಿಟಿಗಳಿಗೆ ಸಿಕ್ಕಿದ ಮತದ ಆಧಾರದ ಮೇಲೆ ರೇಖಾ ಮತ್ತು ಮೋದಿ ಗೆಲವು ಸಾಧಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ