ಐ ಎಸ್ ವಿರೋಧಿ ಕಾಳಗಕ್ಕೆ ಹಣ ನೀಡಿಲ್ಲ: ಒಬಾಮ

ಸನ್ನಿ ತೀವ್ರಗಾಮಿ ಸಂಘಟನೆ ಇಸ್ಲಾಮಿಕ್ ಸ್ಟೇಟ್ (ಐ ಎಸ್) ಮಾರಕ
ಬರಾಕ್ ಒಬಾಮ (ಸಂಗ್ರಹ ಚಿತ್ರ)
ಬರಾಕ್ ಒಬಾಮ (ಸಂಗ್ರಹ ಚಿತ್ರ)

ವಾಶಿಂಗ್ ಟನ್: ಸನ್ನಿ ತೀವ್ರಗಾಮಿ ಸಂಘಟನೆ ಇಸ್ಲಾಮಿಕ್ ಸ್ಟೇಟ್ (ಐ ಎಸ್) ಮಾರಕ ಎಂದು ಸಂದರ್ಶನವೊಂದರಲ್ಲಿ ಸೋಮವಾರ ಮತ್ತೆ ತಿಳಿಸಿರುವ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ, ಈ ಉಗ್ರಗಾಮಿ ಸಂಘಟನೆಯ ವಿರುದ್ಧದ ಕಾಳಗಕ್ಕೆ ಮತ್ತೆ ಟ್ರಿಲಿಯನ್ ಡಾಲರ್ ನಿಧಿ ನೀಡಿರುವ ವರದಿಯನ್ನು ತಳ್ಳಿಹಾಕಿದ್ದಾರೆ.

"ಐ ಎಸ್ ನಿಂದ ಇರುವ ಅಪಾಯವನ್ನು ತಳ್ಳಿಹಾಕುವಂತಿಲ್ಲ" ಎಂದು ಸಿರಿಯಾ ಮತ್ತು ಇರಾಕ್ ನ ಕೆಲವು ಭಾಗಗಳನ್ನು ಆಕ್ರಮಿಸಿಕೊಂಡಿರುವ ಉಗ್ರಗಾಮಿ ಸಂಘಟನೆಯ ಬಗ್ಗೆ ರಾಷ್ಟ್ರೀಯ ಸಾರ್ವಜನಿಕ ರೇಡಿಯೊ (ಎನ್ ಪಿ ಆರ್) ನಲ್ಲಿ ಹೇಳಿದ್ದಾರೆ.

ಇರಾಕ್ ಮತ್ತು ಸಿರಿಯಾದಲ್ಲಿ ಐ ಎಸ್ ಉಗ್ರಗಾಮಿಗಳ ನಿರ್ಮೂಲನೆಗೆ ವಾಯುದಾಳಿಯನ್ನು ನಡೆಸುತ್ತಿರುವ ವಾಶಿಂಗ್ ಟನ್, ಈ ಸಂಘಟನೆಯ ಸಂಪೂರ್ಣ ನಿರ್ಮೂಲನೆಗೆ ಇನ್ನೂ ಹೆಚ್ಚಿನ ಸಮಯ ಬೇಕಾಗಿದೆ ಎಂದು ತಿಳಿಸಿದೆ.

"ಯು ಎಸ್ ನಲ್ಲಿ ನಮ್ಮ ಶಾಲೆಗಳನ್ನು, ರಸ್ತೆಗಳನ್ನು ಮತ್ತು ಮೂಲ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗಳನ್ನು ಮರು ನಿರ್ಮಾಣ ಮಾಡಲು ನಮಗೆ ಟ್ರಿಲಿಯನ್ ಡಾಲರ್ ಬೇಕಾಗಿದೆ ಮತ್ತು ಇದೇ ನಮ್ಮ ಮಂದುವರೆದ ಭದ್ರತೆಗೆ ಸಹಕಾರಿಯಾಗುವುದು" ಎಂದ ಬರಾಕ್ ಒಬಾಮ ಉಗ್ರಗಾಮಿ ಸಂಘಟನೆಯ ವಿರುದ್ಧದ ಕಾಳಗಕ್ಕೆ ಮತ್ತೆ ಟ್ರಿಲಿಯನ್ ಡಾಲರ್ ನಿಧಿ ನೀಡಿರುವ ವರದಿಯನ್ನು ಪರೋಕ್ಷವಾಗಿ ತಳ್ಳಿಹಾಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com