ಸಮುದ್ರದ ತಳದಲ್ಲಿ ಏರ್ ಏಷ್ಯಾ ವಿಮಾನದ ಅವಶೇಷ ಪತ್ತೆ ಹಚ್ಚಿದ ಸೋನಾರ್

ಸತತ ನಾಲ್ಕು ದಿನಗಳ ನಿರಂತರ ಕಾರ್ಯಾಚರಣೆಯ ಬಳಿಕ 162 ಪ್ರಯಾಣಿಕರೊಂದಿಗೆ ನಿಗೂಢವಾಗಿ ನಾಪತ್ತೆಯಾಗಿದ್ದ...
ಸಮುದ್ರದ ತಳದಲ್ಲಿ ಏರ್ ಏಷ್ಯಾ ವಿಮಾನದ ಅವಶೇಷ ಪತ್ತೆ ಹಚ್ಚಿದ ಸೋನಾರ್

ಜಕಾರ್ತಾ: ಸತತ ನಾಲ್ಕು ದಿನಗಳ ನಿರಂತರ ಕಾರ್ಯಾಚರಣೆಯ ಬಳಿಕ 162 ಪ್ರಯಾಣಿಕರೊಂದಿಗೆ ನಿಗೂಢವಾಗಿ ನಾಪತ್ತೆಯಾಗಿದ್ದ ಏರ್ ಏಷ್ಯಾ ವಿಮಾನದ ಅವಶೇಷಗಳ ಬುಧವಾರ ಜಾವಾ ಸಮುದ್ರದ ತಳದಲ್ಲಿ ಪತ್ತೆಯಾಗಿವೆ.

ಇಂಡೋನೇಷ್ಯಾದ ಸೋನಾರ್ ಸಾಧನ ಸಮುದ್ರದ ತಳದಲ್ಲಿ ಸುಮಾರು ೩೦ರಿಂದ ೫೦ ಮೀ. ಆಳದಲ್ಲಿ ವಿಮಾನದ ಅವಶೇಷಗಳನ್ನು ಪತ್ತೆ ಹಚ್ಚಿದೆ ಎಂದು ವಾಲ್ ಸ್ಟ್ರೀಟ್ ವರದಿ ಮಾಡಿದೆ.

ಕಳೆದ ಭಾನುವಾರ ಬೆಳಗ್ಗೆ ನಾಪತ್ತೆಯಾಗಿದ್ದ ಏರ್ ಏಷ್ಯಾ 8501 ವಿಮಾನದ ಭಗ್ನಾವಶೇಷಗಳು ಹಾಗೂ ಮಹಿಳಾ ಪೈಲೆಟ್ ಸೇರಿದಂತೆ ಮತ್ತೆ ಆರು ಮೃತದೇಹಗಳು ಇಂದು ಪತ್ತೆಯಾಗಿದ್ದು, ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಸಂಸ್ಥೆಯ ಮುಖ್ಯಸ್ಥ ಬಂಬಾಂಗ್ ಸೋಲಿಸ್ಟಿಯೋ ಅವರು ಸುದ್ದಿಗೊಷ್ಠಿಯಲ್ಲಿ ತಿಳಿಸಿದ್ದಾರೆ.

ಜಾವಾ ಸಮುದ್ರದಲ್ಲಿ ತೆಲುತ್ತಿದ್ದ ಮೂರು ಮೃತ ದೇಹಗಳನ್ನು ನಿನ್ನೆ ಹೊರ ತೆಗೆಯಲಾಗಿತ್ತು. ಅಲ್ಲದೆ ಪತ್ತೆಯಾದ ಮೃತದೇಹಗಳು ಏರ್ ಏಷ್ಯಾ ವಿಮಾನದ ಪ್ರಯಾಣಿಕರದ್ದೇ ಎಂದು ಅಧಿಕಾರಿಗಳು ಖಚಿತಪಡಿಸಿದ್ದರು.

ಇಂಡೋನೇಷ್ಯಾದಿಂದ ಸಿಂಗಾಪುರಕ್ಕೆ ಪ್ರಯಾಣ ಬೆಳೆಸುತ್ತಿದ್ದ ಏರ್‌ ಏಷ್ಯಾದ ಕ್ಯುಝಡ್‌8501 ವಿಮಾನ ಭಾನುವಾರ ಟೇಕಾಫ್ ಆದ 42 ನಿಮಿಷದಲ್ಲಿ ಸಂಪರ್ಕ ಕಡಿದುಕೊಂಡಿತ್ತು. ಈ ವಿಮಾನದ ಶೋಧಕ್ಕಾಗಿ ಸೋಮವಾರ ನಡೆದ ಕಾರ್ಯಾಚರಣೆ ವೇಳೆ ಇಂಡೋನೇಷ್ಯಾ ಹೆಲಿಕಾಪ್ಟರ್‌ವೊಂದು ಜಾವಾ ಬಳಿ ಸಮುದ್ರದಲ್ಲಿ ಎರಡು ತೈಲ ಕಲೆಗಳನ್ನು ಪತ್ತೆ ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com