72 ಗಂಟೆಗಳ ಅವಧಿಯಲ್ಲಿ 13 ನವಜಾತ ಶಿಶುಗಳು ಸಾವು

ಇಲ್ಲಿನ ಸರ್ಕಾರಿ ಮಾಲ್ಡಾ ಮೆಡಿಕಲ್ ಕಾಲೇಜಿನಲ್ಲಿ ಕಳೆದ 72 ಗಂಟೆಗಳಲ್ಲಿ 13 ನವಜಾತ ಶಿಶುಗಳು ಸಾವನ್ನಪ್ಪಿರುವ ಬಗ್ಗೆ ವರದಿ...
ಶಿಶು ಮರಣ
ಶಿಶು ಮರಣ

ಪಶ್ಚಿಮ ಬಂಗಾಳ: ಇಲ್ಲಿನ ಸರ್ಕಾರಿ ಮಾಲ್ಡಾ ಮೆಡಿಕಲ್ ಕಾಲೇಜಿನಲ್ಲಿ ಕಳೆದ 72 ಗಂಟೆಗಳಲ್ಲಿ 13 ನವಜಾತ ಶಿಶುಗಳು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.

ಸಾವಿಗೀಡಾಗಿರುವ ಶಿಶುಗಳು 1-4 ದಿನದವುಗಳಾಗಿವೆ ಎಂದು ಪ್ರಸ್ತುತ ಆಸ್ಪತ್ರೆಯ ಮೆಡಿಕಲ್ ಸುಪರಿಟೆಂಡೆಂಟ್ ಹಾಗೂ ಉಪ ಪ್ರಾಂಶುಪಾಲರಾಗಿರುವ ಎಂ.ಎ . ರಶೀದ್ ಹೇಳಿದ್ದಾರೆ.

ಜಾರ್ಖಂಡ್ ಮತ್ತು ಬಿಹಾರದ ಗ್ರಾಮೀಣ ಪ್ರದೇಶದ ಶಿಶುಗಳನ್ನು ಈ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ದಾಖಲಿಸುವ ಹೊತ್ತಿಗೆ ಶಿಶುಗಳ ಸ್ಥಿತಿ ಚಿಂತಾಜನಕವಾಗಿತ್ತು ಎಂದು  ವೈದ್ಯರು ಹೇಳಿದ್ದಾರೆ.

ಅಂಥಾ ಪರಿಸ್ಥಿತಿಯಲ್ಲಿ ಮಕ್ಕಳನ್ನು ಉಳಿಸುವುದು ಕಷ್ಟವಾಗಿತ್ತು ಎಂದು ಹೇಳಿದ ವೈದ್ಯರು, ಸಾವನ್ನಪ್ಪಿರುವ ಶಿಶುಗಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದವು ಎಂದಿದ್ದಾರೆ.

ಏತನ್ಮಧ್ಯೆ, ಅನಾರೋಗ್ಯ ಪೀಡಿತ ಮಕ್ಕಳನ್ನು ಆಸ್ಪತ್ರೆಗೆ ಸಾಗಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದಲೂ ತಕ್ಕ ಸಮಯಕ್ಕೆ ಆರೈಕೆ ಸಿಗದೆ ಶಿಶುಗಳು ಮರಣವನ್ನಪ್ಪಿವೆ ಎಂದು ವೈದ್ಯರು ಹೇಳಿದ್ದಾರೆ .

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com