ಬದ್‌ಗಾಂ ದಾಳಿ : ಜನರ ಸಾವಿನ ಹೊಣೆ ಹೊತ್ತ ಭಾರತೀಯ ಸೇನೆ

ಸೋಮವಾರ ಜಮ್ಮು ಮತ್ತು ಕಾಶ್ಮೀರದ ಬದ್ಗಾಂ ಜಿಲ್ಲೆಯಲ್ಲಿ ನಡೆದ ಗುಂಡು ಹಾರಾಟದಲ್ಲಿ ಇಬ್ಬರು ಯುವಕರು ಸಾವಿಗೀಡಾಗಿದ್ದು...
ಲೆ. ಜನರಲ್ ಡಿ.ಎಸ್ ಹೂಡಾ
ಲೆ. ಜನರಲ್ ಡಿ.ಎಸ್ ಹೂಡಾ

ಶ್ರೀನಗರ: ಸೋಮವಾರ ಜಮ್ಮು ಮತ್ತು ಕಾಶ್ಮೀರದ ಬದ್ಗಾಂ ಜಿಲ್ಲೆಯಲ್ಲಿ ನಡೆದ ಗುಂಡು ಹಾರಾಟದಲ್ಲಿ ಇಬ್ಬರು ಯುವಕರು ಸಾವಿಗೀಡಾಗಿದ್ದು, ಭಾರತೀಯ ಸೇನೆ ಈ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದೆ.

ಶುಕ್ರವಾರ ಸುದ್ದಿಗೋಷ್ಠಿ ಕರೆದ ನಾರ್ಥನ್ ಕಮಾಂಡ್‌ನ ಜನರಲ್ ಆಫೀಸರ್ ಆಫ್ ಕಮಾಂಡಿಂಗ್ ಇನ್ ಚೀಫ್ ಲೆ. ಜನರಲ್ ಡಿ.ಎಸ್ ಹೂಡಾ , ತಮ್ಮ ಸೇನೆಯಿಂದ ತಪ್ಪಾಗಿದೆ. ಇನ್ಮುಂದೆ ಈ ರೀತಿ ಆಗಲ್ಲ ಎಂದು ಹೇಳಿದ್ದಾರೆ.

ತಪ್ಪಾದ ಮಾಹಿತಿ ಲಭಿಸಿರುವುದರಿಂದ ಈ ರೀತಿಯ ಘಟನೆ ನಡೆದಿದೆ. ಉಗ್ರರನ್ನು ಹೊತ್ತ ಬಿಳಿ ಕಾರೊಂದು ಅಲ್ಲಿ ನಿಂತಿದೆ ಎಂದು ನಮಗೆ ತಪ್ಪಾದ ಮಾಹಿತಿ ಲಭಿಸಿತ್ತು. ಆದ್ದರಿಂದಲೇ ನಾವು ಅತ್ತ ಗುಂಡಿನ ದಾಳಿ ಮಾಡಿದೆವು. ಈ ದಾಳಿಯಲ್ಲಿ ವ್ಯಕ್ತಿಗಳು ಸಾವಿಗೀಡಾಗಿದ್ದು ಇಗರ ಹೊಣೆಯನ್ನು ನಾವು ಹೊರುತ್ತೇವೆ ಎಂದು ಹೂಡಾ ಹೇಳಿದ್ದಾರೆ.

ಯಾವುದೇ ಕ್ರಮ ಕೈಗೊಳ್ಳುವ ಮುನ್ನ ನಾವು ಅತೀವ ಜಾಗ್ರತೆ ವಹಿಸುತ್ತೇನೆ. ಆದರೆ ಈ ತಪ್ಪು ಹೇಗೆ ನಡೆಯಿತು ಎಂದು ಅರ್ಥವಾಗುತ್ತಿಲ್ಲ. ಯಾವುದೇ ನಿಯಮ ಉಲ್ಲಂಘನೆಯಾಗಿದ್ದರೆ ನಾವು ತಕ್ಕ ಕ್ರಮ ತೆಗೆದುಕೊಳ್ಳುತ್ತೇವೆ. ಈ ಬಗ್ಗೆ ನಾವು 10 ದಿನಗಳಲ್ಲಿ ತನಿಖೆ ನಡೆಸಲಿದ್ದೇವೆ.

ಆದಾಗ್ಯೂ, ಇನ್ಮುಂದೆ ಅಂಥಾ ಘಟನೆಗಳು ಮರುಕಳಿಸದಿರಲಿ ಎಂದು ನಾವು ಆಶಿಸುತ್ತೇವೆ ಎಂದು ಹೂಡಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com