ಕುಟುಂಬ ನಿಯಂತ್ರಣ ಶಸ್ತ್ರಚಿಕಿತ್ಸೆ: ಬಿಲಾಸ್ ಪುರ ಕ್ಯಾಂಪ್ ನಲ್ಲಿ ೮ ಸಾವು

ಬಿಲಾಸ್ ಪುರದಲ್ಲಿ ಚತೀಸ್ ಘರ್ ಸರ್ಕಾರ ಆಯೋಜಿಸಿದ್ದ ಕುಟುಂಬ ನಿಯಂತ್ರಣ ಶಸ್ತ್ರಚಿಕಿತ್ಸಾ ಕ್ಯಾಂಪ್ ನಲ್ಲಿ,...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬಿಲಾಸ್ ಪುರ: ಬಿಲಾಸ್ ಪುರದಲ್ಲಿ ಚತ್ತೀಸ್ ಘರ್ ಸರ್ಕಾರ ಆಯೋಜಿಸಿದ್ದ ಕುಟುಂಬ ನಿಯಂತ್ರಣ ಶಸ್ತ್ರಚಿಕಿತ್ಸಾ ಕ್ಯಾಂಪ್ ನಲ್ಲಿ, ಶಸ್ತ್ರಚಿಕಿತ್ಸೆಯ ನಂತರ ೮ ಜನ ಮಹಿಳೆಯರು ಸಾವನ್ನಪ್ಪಿ ೧೫ ಜನ ಮಹಿಳೆಯರು ತೀವ್ರ ಅಸ್ವಸ್ಥರಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ.

ಬಿಲಾಸ್ ಪುರದ ಪೆಂಡಾರಿ ಪ್ರದೇಶದಲ್ಲಿ ಆಯೋಜಿಸಲಾಗಿದ್ದ ಈ ಶಿಬಿರದಲ್ಲಿ ೮೦ ಕ್ಕೂ ಹೆಚ್ಚು ಮಹಿಳೆಯರು ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು.

ಆರೋಗ್ಯ ಸಚಿವ ಅಮರ್ ಅಗರವಾಲ್ ಅವರ ಸ್ವಕ್ಷೇತ್ರದಲ್ಲೇ ಶನಿವಾರ ಈ ಶಿಬಿರವನ್ನು ಆಯೋಜಿಸಲಾಗಿತ್ತು. ಮೂಲಗಳ ಪ್ರಕಾರ ಶಸ್ತ್ರಚಿಕಿತ್ಸೆಗೆ ಒಳಪಟ್ಟ ಮಹಿಳೆಯರು ಸೋಮವಾರದ ವೇಳೆಗೆ ಜ್ವರದಿಂದ ನರಳಲು ಪ್ರಾರಂಭಿಸಿದರು ಎನ್ನಲಾಗಿದೆ. ಆದರೆ ಆರೋಗ್ಯ ಅಧಿಕಾರಿಗಳು ಯಾವುದೇ ನಿರ್ಲಕ್ಷ್ಯೆಯನ್ನು ಅಲ್ಲಗೆಳೆದಿದ್ದಾರೆ.

ಈ ದುರಂತದ ತನಿಖೆಗೆ ಸರ್ಕಾರ ಮೂರು ಜನರ ಸಮಿತಿಯೊಂದನ್ನು ರಚಿಸಿದೆ.

ಮೃತಪಟ್ಟ ಮಹಿಳೆಯರ ಕುಟುಂಬಕ್ಕೆ ೨ ಲಕ್ಷ ರೂ ಪರಿಹಾರ ಧನವನ್ನು ಘೋಷಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ೫೦ ಸಾವಿರ ರೂ ಪರಿಹಾರ ನೀಡಲಾಗುತ್ತಿದೆ.

ಮಾಜಿ ಕೇಂದ್ರ ಸಚಿವ ದಿಗ್ವಿಜಯ್ ಸಿಂಗ್ ಈ ಘಟನೆಯ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದು ಆರೋಗ್ಯ ಸಚಿವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com