ಏಸಿಯಾನ್ ಭಾಗವಹಿಸಲು ಮಯನ್ಮಾರಿಗೆ ಬಂದಿಳಿದ ಪ್ರಧಾನಿ ಮೋದಿ

ಏಸಿಯಾನ್ ಮತ್ತು ಪೂರ್ವ ಏಷಿಯಾ ಶೃಂಗ ಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಯನ್ಮಾರಿನ ...
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)

ನಾಯ್ ಪ್ಯಿ ತಾವ್: ಏಸಿಯಾನ್ ಮತ್ತು ಪೂರ್ವ ಏಷಿಯಾ ಶೃಂಗ ಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಯನ್ಮಾರಿನ ರಾಜಧಾನಿಯಲ್ಲಿ ಬಂದಿಳಿದರು. ಇದು ಮೂರು ದೇಶದ ಪ್ರವಾಸದಲ್ಲಿ ಮೊದಲನೆಯದು. ಆಸ್ಟೇಲಿಯಾ ಮತ್ತು ಫಿಜಿ ದೇಶಗಳಿಗೆ ನಂತರ ಪ್ರಧಾನಿಯವರು ಪ್ರವಾಸ ಮುಂದುವರೆಸಲಿದ್ದಾರೆ.

ಏರ್ ಇಂಡಿಯಾದ ವಿಶೇಷ ವಿಮಾನದಲ್ಲಿ ಬಂದಿಳಿದ ಪ್ರಧಾನಿ ಮೋದಿ, ತಮ್ಮ ೧೦ ದಿನದ ಪ್ರವಾಸದಲ್ಲಿ ಆಸ್ಟ್ರೇಲಿಯಾದ ಬ್ರಿಸ್ಬೇನಿನಲ್ಲಿ ಜಿ-೨೦ ಸಮ್ಮೇಳನದಲ್ಲಿ ಕೂಡ ಭಾಗವಹಿಸಲಿದ್ದಾರೆ.

ಅಸೋಸಿಯೇಶನ್ ಆಫ್ ಸೌತ್ ಈಸ್ಟ್ ಏಶಿಯನ್ ನೇಷನ್ಸ್ (ಏಸಿಯಾನ್) ಸಮಾವೇಶ ಭಾರತದ "ಪೂರ್ವ ಏಶಿಯಾದ ಕಾರ್ಯ" ನೀತಿಯಲ್ಲಿ ಪ್ರಮುಖವಾದದ್ದು ಎಂದು ಬಣ್ಣಿಸಿದ ಪ್ರಧಾನಿ, ಮಯನ್ಮಾರಿಗೆ ತೆರಳುವ ಮುಂಚೆ ಏಶಿಯಾನ್ ಸದಸ್ಯ ನಾಯಕರ ಜೊತೆ ನಮ್ಮ ಸಂಬಂಧವನ್ನು ಮುಂದಿನ ಸ್ತರಕ್ಕೆ ಕೊಂಡೊಯ್ಯುವುದರ ಬಗ್ಗೆ ಚರ್ಚೆ ಮಾಡಲಾಗುವುದು ಎಂದಿದ್ದಾರೆ.

ಪ್ರಧಾನ ಮಂತ್ರಿ ಅವರು ಏಷಿಯಾ, ಆಫ್ರಿಕಾ, ಯೂರೋಪ್, ಉತ್ತರ ಅಮೇರಿಕಾ, ದಕ್ಷಿಣ ಅಮೇರಿಕಾ ಸೇರಿದಂತೆ ೪೦ ರಾಷ್ಟ್ರದ ನಾಯಕರ ಜೊತೆ ಭಾರತ-ಏಸಿಯಾನ್ ಮತ್ತು ಪೂರ್ವಾ ಏಷಿಯಾ ಸಮಾವೇಶಗಳಲ್ಲಿ ನವೆಂಬರ್ ೧೨-೧೩ ರಂದು ಮಯನ್ಮಾರ್ ರಾಜಧಾನಿ ನಾಯ್ ಪ್ಯಿ ತಾವ್ ನಲ್ಲಿ ಮತ್ತು ಬ್ರಿಸ್ಬೇನ್ ನಲ್ಲಿ ನಡೆಯಲಿರುವ ಜಿ-೨೦ ಸಮ್ಮೇಳನ ಮತ್ತು ಫಿಜಿ ದ್ವೀಪಗಳಲ್ಲಿನ ಪ್ರವಾಸದಲ್ಲಿ ಮಾತುಕತೆ ನಡೆಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com