
ಚೆನ್ನೈ: ತಮಿಳುನಾಡಿನ ರಾಜಕೀಯದಲ್ಲಿ ಇನ್ನೂ ನೆಲೆ ಕಂಡುಕೊಳ್ಳಬೇಕಿರುವ ಭಾರತೀಯ ಜನತಾ ಪಕ್ಷ ೨೦೧೬ ರ ವಿಧಾನಸಭಾ ಚುನಾವಣೆಯಲ್ಲಿ ೧೨೨ ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬರುವ ಮಹತ್ವಾಕಾಂಕ್ಷೆಯ ಗುರಿ ಇಟ್ಟುಕೊಂಡಿದೆ ಎಂದು ಬುಧವಾರ ಪಕ್ಷ ತಿಳಿಸಿದೆ.
"ದೆಹಲಿಯಲ್ಲಿ ರೆಡ್ ಫೋರ್ಟ್ ಅನ್ನು ವಶ ಪಡಿಸಿಕೊಂಡ ಹಾಗೆಯೇ ಫೋರ್ಟ್ ಸೆಂಟ್ ಜಾರ್ಜ್ ಗೆ (ತಮಿಳುನಾಡು ವಿಧಾನ ಸಭೆ) ನಾವು ಲಗ್ಗೆ ಇಡುತ್ತೇವೆ. ಒಂದು ಕೋಟಿ ಸದಸ್ಯತ್ವದ ಗುರಿ ಸಾಧಿಸಿ ಅಧಿಕಾರಕ್ಕೆ ಬರುತ್ತೇವೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ತಮಿಳುಸಾಯಿ ಸೌಂದರರಾಜನ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಇಂದು ತಿಳಿಸಿದ್ದಾರೆ.
"ಎ ಐ ಡಿ ಎಂ ಕೆ ಅಧ್ಯಕ್ಷೆ ಜಯಲಲಿತಾ ಅವರು ಮಿತಿಮೀರಿದ ಆಸ್ತಿ ಪ್ರಕರಣದಲ್ಲಿ ಅಪರಾಧಿಯೆಂದು ನ್ಯಾಯಾಲಯ ತೀರ್ಪಿತ್ತ ಮೇಲೆ ಮುಖ್ಯಮಂತ್ರಿ ಸ್ಥಾನಕ್ಕೆ ಇತ್ತೀಚೆಗಷ್ಟೇ ರಾಜೀನಾಮೆ ನೀಡಿ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಡಿ ಎಂ ಕೆ ಪಕ್ಷ ಕೌಟುಂಬಿಕ ರಾಜಕೀಯ ಕಳಹದಲ್ಲೇ ಮುಳುಗಿ ಅಸ್ತಿತ್ವ ಉಳಿಸಿಕೊಳ್ಳುವಲ್ಲಿಗೆ ಬಂದು ನಿಂತಿದೆ. ಕಾಂಗ್ರೆಸ್ ಪಕ್ಷ ತಮಿಳುನಾಡಿನ ರಾಜಕೀಯ ಸೀನ್ ನಿಂದಲೇ ಕಾಣೆಯಾಗಿದೆ. " ಎಂದು ಬಿಜೆಪಿ ಹಿರಿಯ ನಾಯಕ ಪಿ ಮುರಳೀಧರ್ ರಾವ್ ತಿಳಿದಿದ್ದಾರೆ.
Advertisement