ಪಾಕ್ ಶಾಲಾ ಸಂಘಗಳಿಂದ ಮಲಾಲಾಳಿಗೆ ಬಹಿಷ್ಕಾರ

ಪಾಕಿಸ್ತಾನದ ಖಾಸಗಿ ಶಾಲಾ ಸಂಘಗಳು ನೋಬೆಲ್ ಪ್ರಶಸ್ತಿ ವಿಜೇತೆ ಮಲಾಲಾ ಯೂಸಫ್‌ಜಾಯಿ ವಿರುದ್ದ....
ಮಲಾಲಾ ಯೂಸಫ್‌ಜಾಯಿ
ಮಲಾಲಾ ಯೂಸಫ್‌ಜಾಯಿ

ನ್ಯೂಯಾರ್ಕ್: ಪಾಕಿಸ್ತಾನದ ಖಾಸಗಿ ಶಾಲಾ ಸಂಘಗಳು ನೋಬೆಲ್ ಪ್ರಶಸ್ತಿ ವಿಜೇತೆ ಮಲಾಲಾ ಯೂಸಫ್‌ಜಾಯಿ ವಿರುದ್ದ ಬಹಿಷ್ಕಾರ ಕೂಗಿವೆ.

ಮಲಾಲಾಳ ವಿರುದ್ಧ ಸಿಡಿದೆದ್ದಿರುವ ಪಾಕಿಸ್ತಾನದ ಖಾಸಗಿ ಶಾಲಾ ಸಂಘದ 15,000 ವಿದ್ಯಾರ್ಥಿಗಳು ಸೋಮವಾರ 'ಐ ಆ್ಯಮ್ ನಾಟ್ ಮಲಾಲಾ' ದಿನವನ್ನು ಆಚರಿಸಿಕೊಂಡಿದೆ.

ಅದೇ ವೇಳೆ ಮಲಾಲಾಳ ಆತ್ಮಕತೆ  'ಐ ಆ್ಯಮ್ ಮಲಾಲಾ'  ಪಾಕಿಸ್ತಾನದ ವಿಚಾರ ಪರಂಪರೆಗೆ ವಿರುದ್ಧವಾಗಿದ್ದು, ಆ ಪುಸ್ತಕವನ್ನು ನಿಷೇಧಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.

2012ರಲ್ಲಿ  ಸ್ವಾತ್ ಕಣಿವೆಯ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೋರಾಡುತ್ತಿದ್ದ ಮಲಾಲಾಳ ಮೇಲೆ ತಾಲೀಬಾನ್ ಉಗ್ರರು ಗುಂಡು ಹಾರಿಸಿದ್ದರು. ನಂತರ ಬ್ರಿಟನ್‌ನಲ್ಲಿ ಚಿಕಿತ್ಸೆ ಪಡೆದು ಮಲಾಲಾ ಗುಣಮುಖವಾಗಿದ್ದಳು.

ಮಲಾಲಾಳಿಗೆ ತನ್ನ ತಾಯ್ನಾಡಲ್ಲಿ ಜೀವ ಬೆದರಿಕೆಯಿರುವ ಕಾರಣ ಪ್ರಸ್ತುತ ಇಂಗ್ಲೆಂಡ್‌ನಲ್ಲಿ ವಿದ್ಯಾಭ್ಯಾಸ ಮುಂದುವರಿಸುತ್ತಿದ್ದಾಳೆ. ತಿಂಗಳ ಹಿಂದೆಯಷ್ಟೇ ಈಕೆ ನೋಬೆಲ್ ಪ್ರಶಸ್ತಿ ಗೆ ಭಾಜನಳಾಗಿದ್ದಳು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com