ಕೆಪಿಎಸ್‌ಸಿ: ಕೆಲಸ ಕಳೆದುಕೊಳ್ಳಲಿದ್ದಾರೆ 25 ಅಧಿಕಾರಿಗಳು

ಹೈಕೋರ್ಟ್ ಸೂಚನೆಯಂತೆ 1998ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಎ ಮತ್ತು ಬಿ ವೃಂದದ 383 ಅಧಿಕಾರಿಗಳ...
ಕೆಪಿಎಸ್‌ಸಿ
ಕೆಪಿಎಸ್‌ಸಿ
Updated on

ಬೆಂಗಳೂರು: ಹೈಕೋರ್ಟ್ ಸೂಚನೆಯಂತೆ 1998ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಎ ಮತ್ತು ಬಿ ವೃಂದದ 383 ಅಧಿಕಾರಿಗಳ ಪರಿಷ್ಕೃತ ರ್ಯಾಂಕಿಂಗ್ ಪಟ್ಟಿಯನ್ನು ಕೆಪಿಎಸ್‌ಸಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಪಟ್ಟಿ ಪ್ರಕಾರ 25 ಅಧಿಕಾರಿಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

1998ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಎ ಮತ್ತು ಬಿ ವೃಂದದಲ್ಲಿ ನೇಮಕವಾದ 383 ಅಭ್ಯರ್ಥಿಗಳ ಪರಿಷ್ಕೃತ ಪಟ್ಟಿಯನ್ನು 24 ಗಂಟೆಯೊಳಗೆ ಪ್ರಕಟಿಸುವಂತೆ ಹೈಕೋರ್ಟ್ ಮಂಗಳವಾರ ಆದೇಶಿಸಿತ್ತು. ಅದರಂತೆ ಕೆಪಿಎಸ್‌ಸಿ ಪರಿಷ್ಕೃತ ಪಟ್ಟಿಯನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ಇದರಿಂದ 28 ಅಧಿಕಾರಿಗಳು ಹೊಸದಾಗಿ ಸೇರ್ಪಡೆಯಾಗಲಿದ್ದಾರೆ. ಅಲ್ಲದೆ ಪಟ್ಟಿಯಲ್ಲಿನ ಮಾಹಿತಿ ಪ್ರಕಾರ ಆಯ್ಕೆ ಆಗಿರುವ 140 ಅಧಿಕಾರಿಗಳ ಸ್ಥಾನಪಲ್ಲಟವಾಗಲಿದೆ. ಆಯ್ಕೆ ಆಗಿದ್ದ ಮೂರು ಅಧಿಕಾರಿಗಳಾದ ಆರ್.ತೇಜೋಮೂರ್ತಿ, ಕೆ.ಮಾಯಣ್ಣಗೌಡ ಮತ್ತು ಕೆ.ನರಸಿಂಹಮೂರ್ತಿ ಅವರ ಹೆಸರು ಹೊಸದಾಗಿ ನಡೆಸಿದ ವ್ಯಕ್ತಿತ್ವ ಪರೀಕ್ಷೆಯ ಪಟ್ಟಿಯಿಂದ ಕೈ ಬಿಡಲಾಗಿದ್ದು, ಈ ಮೂವರು ಅನರ್ಹರಾಗಿದ್ದಾರೆ.

ಕೆಪಿಎಸ್‌ಸಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ಹಿತಾಸಕ್ತಿ ಅರ್ಜಿ ಆಲಿಸುತ್ತಿರುವ ನ್ಯಾ.ಎನ್.ಕುಮಾರ್ ಅವರ ವಿಭಾಗೀಯ ಪೀಠ ಮಂಗಳವಾರ ಪರಿಷ್ಕೃತ ಪಟ್ಟಿಯನ್ನು 24 ಗಂಟೆಯೊಳಗೆ ಪ್ರಕಟಿಸುವಂತೆ ಕೆಪಿಎಸ್‌ಸಿಗೆ ಆದೇಶಿಸಿ, ವಿಚಾರಣೆಯನ್ನು ನ.18ಕ್ಕೆ ಮುಂದೂಡಿತ್ತು.

ಹೊಸದಾಗಿ ಸೇರ್ಪಡೆಯಾಗಿರುವ 28 ಅಧಿಕಾರಿಗಳು
ಶಂಕರ್ (ಎಆರ್‌ಸಿಎಸ್)
ಶ್ರೀನಿವಾಸ.ಎಸ್ (ಸಿಓ)
ಅಜ್ಮತುಲ್ಲಾ ಖಾನ್ (ಡಿವೈಎಸ್‌ಪಿ)
ಮೊಹಮ್ಮದ್ ಯೂಸಫ್ (ಎಸಿಎ)
ವೇಣು ಡಿವಿ (ಎಸಿಎ)
ಗಿರೀಶ್ ಒ (ಎಸಿಎ)
ಶಂಕರೇಗೌಡ (ಎಸಿಎ)
ಮೊಹಮ್ಮದ್ ಆಕ್ಬರ್ (ಉದ್ಯೋಗ ಅಧಿಕಾರಿ)
ಸೇಸುನಾಥನ್ (ಸಿಟಿಒ)
ಪಾಟೀಲ್ ಶಿವನಗೌಡ ನಾಗನಗೌಡ (ಎಡಿಎಲ್‌ಆರ್)
ಭಾಸ್ಕರ್ ನಾಯ್ಕ್ (ಎಡಿವೈಎಸ್)
ಪಾಂಡುರಂಗಯ್ಯ (ಎಟಿಒ)
ಮಲ್ಲಿಕಾರ್ಜುನ್ ಬಿರಾದರ್ (ಎಸಿಎ)
ತಾರಾನಾಥ್ (ಎಸಿಎ)
ಮಹದೇವಪ್ಪ ಆರ್ (ಎಸಿಎ)
ಅಶ್ವಿನಿ ವೈ.ಟಿ.(ಎಆರ್‌ಸಿಎಸ್)
ರವಿಚಂದ್ರ ಎಂ. (ಡಿಎಂಒ)
ಸಂಗೀತ (ಡಿಎಂಒ)
ಮಂಜುನಾಥ್ ವೈ. (ಎಆರ್‌ಸಿಎಸ್)
ವಿದ್ಯಾ ಹೊಣಶೆಟ್ಟಿ (ಎಸಿಎ)
ಪರಶುರಾಮ್ ಎಸ್ ವಾಲಿಕರ್ (ಉದ್ಯೋಗ ಅಧಿಕಾರಿ)
ಮಹೇಶ್.ಕೆ. (ಎಡಿವೈಎಸ್)
ನಿವೇದಿತಾ ಟಿಎಂ. (ಎಆರ್‌ಸಿಎಸ್)
ವನಮಾಲ.ಕೆ (ಎಟಿಒ)
ರಾಜರಾಮ್ ರಾವ್ (ಡಿಎಂಒ)
ಶಾಂಸುನೀಸಾ ಸಿ.ಬಿ (ಎಸಿಎ)
ಹೀರಾವತಿ (ಎಸಿಎ)
ಶಶಿರೇಖ ಎಸ್.ಎನ್ (ಎಸಿಎ)

ಪರಿಷ್ಕೃತ ಪಟ್ಟಿಯ ಪ್ರಕಾರ ಕೆಲಸ ಕಳೆದುಕೊಳ್ಳಲಿರುವ 25 ಅಧಿಕಾರಿಗಳು
ಬಸಪ್ಪ ಬಿ (ಸಿಒಜಿಆರ್-1)
ಖಾಜೀ ನಫೀಸಾ (ತಹಸೀಲ್ದಾರ್)
ರಾಮ ಪ್ರಸಾದ್ (ಎಟಿಒ)
ವಿನಯ್ ವಿಠಲ್ ಬಿರಾದಾರ್ (ಎಸಿಎ)
ವಿಜಯ್ ಕುಮಾರ್ (ಎಆರ್‌ಸಿಎಸ್)
ಸಣ್ಣತಂಗೀಯವರ್ ಬಸನಗೌಡರ್ (ಎಸಿಎ)
ರಮೇಶ್ ವಿ (ಡಿಎಂಒ)
ಶಶಿಧರ ಪಿ. (ಎಆರ್‌ಸಿಎಸ್)
ತೀರ್ಥೇಗೌಡ (ಸಿಟಿಒ)
ಸಿದ್ದಲಿಂಗಸ್ವಾಮಿ ಕೆ.ಬಿ. (ಎಟಿಒ)
ಗೋಪಾಲಸ್ವಾಮಿ ಬಿ.ಎನ್ (ಎಟಿಒ)
ಕೇಶವಮೂರ್ತಿ ಎಂ.ಸಿ. (ಎಡಿಎಲ್‌ಆರ್)
ರಾಮಾಂಜನೇಯ ಬಿ (ಎಡಿಎಲ್‌ಆರ್)
ಕಲಂದರ್ ಖಾನ್ (ಉದ್ಯೋಗ ಅಧಿಕಾರಿ)
ಅರುಣ್ ಕುಮಾರ್ ಸಾಂಘ್ವಿ (ಎಡಿಎಫ್‌ಸಿಎಸ್)
ರವಿಕುಮಾರ್ ಎಂ (ಎಡಿಎಲ್‌ಆರ್)
ನಾಗರಾಜ್ ಕೆ.ಬಿ. (ಎಲ್‌ಒ)
ಸುಮತಿ ಎಸ್ (ಎಸಿಎ)
ಹತ್ತಪ್ಪ ಪಿ.ಎಸ್. (ಉದ್ಯೋಗ ಅಧಿಕಾರಿ)
ಜಗದೀಶ್ ಎಂ. (ಎಟಿಒ)
ರಮೇಶ್ ಎಂ.ಸಿ. (ಎಡಿವೈಎಸ್)
ಮಹಬೂಬಿ (ಎಟಿಒ)
ಈಶ್ವರ ಎನ್ (ಡಿಎಂಒ)
ರಾಣಿ ಎಚ್‌ಸಿಎಂ (ಡಿಎಂಒ)
ರೇಖಾ ಡಿ (ಎಸಿಎ)

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com