
ನವದೆಹಲಿ: ಹೊಸದಾಗಿ ಸಂಪುಟ ಸೇರ್ಪಡೆಯಾಗಿರುವ ಮಾನವ ಸಂಪನ್ಮೂಲ ರಾಜ್ಯ ಸಚಿವ ರಾಮ್ ಶಂಕರ್ ಕಥೇರಿಯಾ ತಮ್ಮ ಪದವಿ ಪೂರ್ವ ಅಂಕಪಟ್ಟಿಯನ್ನು ತಿದ್ದಿರುವ ವಿವಾದದ ಬಗ್ಗೆ ಕಾಂಗ್ರೆಸ್ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡಿದೆ.
ಮೋದಿಯವರನ್ನು "ತಾವು ಮಾಡದ ಕೆಲಸಗಳಿಗೂ ಕೀರ್ತಿ ತೆಗೆದುಕೊಳ್ಳುವ ಭಾರತೀಯ ಕಿಂದರಜೋಗಿ" ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಕುಹಕವಾಡಿದ್ದಾರೆ.
"ಮೊದಲಿಗೆ ಮಾನವ ಸಮನ್ಮೂಲ ಸಚಿವೆ ಮತ್ತು ಈಗ ಮಾನವ ಸಂಪನ್ಮೂಲ ರಾಜ್ಯ ಸಚಿವ ನಕಲಿ ಅಂಕಪಟ್ಟಿ ನೀಡಿದ್ದಾರೆ. ಅದರ ಮೇಲೆ ಆರ್ ಎಸ್ ಎಸ್ ಭಾರತದ ಇತಿಹಾಸದ ಪಠ್ಯಪುಸ್ತಕಗಳನ್ನು ಬದಲಾಯಿಸಬೇಕು ಎನ್ನುತ್ತದೆ" ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.
Advertisement