ಕಾಂಗ್ರೆಸ್ ಅಬ್ಬರವನ್ನು ಬುಡಮೇಲು ಮಾಡಿದ ಮೋದಿ ಪ್ರವಾಸ

ಗುಲಾಬಿ ಹೂಗಳು, ಭಾಷಣಗಳು ಮತ್ತು ಕೊನೆಯ ದಿನದ ಸಂಕಲ್ಪ. ಘಾನ ದೇಶದ ಮಾಜಿ ಪ್ರಧಾನಿ...
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ

ನವದೆಹಲಿ: ಗುಲಾಬಿ ಹೂಗಳು, ಭಾಷಣಗಳು ಮತ್ತು ಕೊನೆಯ ದಿನದ ಸಂಕಲ್ಪ. ಘಾನ ದೇಶದ ಮಾಜಿ  ಪ್ರಧಾನಿ ಜಾನ್ ಕುಫೋರ್ ಓದಿದ ಭಾಷಣ ಸಮಾವೇಶದ ಕೊನೆಯ ಘಳಿಗೆಗೆ ಜಾಗತಿಕ ಮೆರುಗು ತಂದಿತ್ತು.

ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರ್ ಲಾಲ್ ನೆಹರು ಅವರ ೧೨೫ ಜನ್ಮ ಶತಾಬ್ಧಿ ಆಚರಣೆಯ ಅಂಗವಾಗಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಎರಡು ದಿನದ ಸಮಾವೇಶದಲ್ಲಿ ಅಗತ್ಯವಾದ ಎಲ್ಲ ಪರಿಕರಗಳು ಇದ್ದವು. ಆದರೆ ಈಡಿಯಟ್ ಡಬ್ಬ (ಟಿ ವಿ) ಈ ಸಮಾವೇಶವನ್ನು ಕಡೆಗಣಿಸಿತು. ಬದಲಾಗಿ ಆಸ್ಟ್ರೇಲಿಯಾಗೆ ಹೋಗಿದ್ದ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿ ಹೆಜ್ಜೆಯನ್ನೂ ಅದು ಪ್ರಸಾರ ಮಾಡುತ್ತಿತ್ತು.

ಟಿ ವಿ ಮಾಧ್ಯಮಗಳ ಕಥೆ ಮೊದಲ ಪ್ರಧಾನಿಯಿಂದ ಇಂದಿನ ಪ್ರಧಾನಿಗೆ ಬದಲಾಗಿದ್ದಾರೆ, ಕಾಂಗ್ರೆಸ್ ಇನ್ನೂ ದಂತಕಥೆಗೇ ಅಂಟಿಕೊಂಡಿತ್ತು!

ಸಮಾವೇಶದ ಎರಡನೆ ದಿನವಾದ ಮಂಗಳವಾರ, ಸಮಾಜವಾದಿ ಪಕ್ಷದ ನಾಯಕ ರಾಮ್ ಗೋಪಾಲ್ ಯಾದವ್ ಮಾತ್ರ ಇಂದಿನ ದಿನದ ರಾಜಕೀಯಕ್ಕೆ ಕೊಂಡಿ ಬೆಸೆದದ್ದು. ಕಾಂಗ್ರೆಸ್ ನ ಹಿರಿಯ ನಾಯಕರಾದ, ಮಾಜಿ ಕೇಂದ್ರ ಸಂಪುಟ ಸಚಿವರೂ ಆದ  ಪಿ ಚಿದಂಬರಂ, ಸುಶೀಲ್ ಕುಮಾರ್ ಶಿಂಧೆ, ಕಪಿಲ್ ಸಿಬಲ್, ಕಮಲ್ ನಾಥ್ ಮತ್ತು ಶಶಿ ತರೂರ್ ಸಮಾವೇಶದಲ್ಲಿ ಗೈರು ಹಾಜರಿದ್ದುದು ಎದ್ದು ಕಾಣುತ್ತಿತ್ತು.

ಎನ್ ಡಿ ಎ ಹೊರತಾದ ನಾಯಕರು ನೆಹರು ಮತ್ತು ನೆಹರೂವಿನ ಭಾರತವನ್ನು ಸಮರ್ಥಿಸಿಕೊಳ್ಳಲು ಉತ್ತಮ ವೇದಿಕೆಯಾಗಿದ್ದ ಸಮಾವೇಶದ ಮೊದಲ ದಿನವನ್ನು ಲೋಹಿಯಾವಾದಿಗಳಾದ ಮುಲಾಯಂ ಸಿಂಗ್ ಯಾದವ್ ಮತ್ತು ಲಾಲು ಪ್ರಸಾದ್ ಯಾದವ್ ಕೂಡ ತಪ್ಪಿಸಿಕೊಂಡರು.

ಎರಡು ದಿನದ ಸಮಾವೇಶದ ನಂತರ ತಳೆದ ಸಂಕಲ್ಪದಲ್ಲಿ ಇಂದಿನ ರಾಜಕೀಯಕ್ಕೆ ಮತ್ತು ಪಕ್ಷಕ್ಕೆ ನೆಹರು ಪ್ರಸ್ತುತತೆಯ ಬಗ್ಗೆಯೇ ಹೆಚ್ಚು ಉಲ್ಲೇಖವಿತ್ತು.

ವಿಶ್ವ ಇಂದು ಸಮುದಾಯಗಳನ್ನು ಒಡೆಯುವ ರಾಜಕೀಯವನ್ನು ದೂರ ಇಡಬೇಕಾಗಿದೆ ಎಂಬ ಘೋಷಣೆ ಸಾರಿತು. ತಮ್ಮ ೨ ದಶಕದ ಆರ್ಥಿಕ ಸುಧಾರಣೆಗಳನ್ನು ಬದಿಗಿಟ್ಟ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ನೆಹರು ಅವರ ಸಮಾಜವಾದವನ್ನು ಹಾಡಿ ಹೊಗಳಿ ಅದು ಬರೀ ಅರ್ಥಶಾಸ್ತ್ರವಲ್ಲ ಜೀವನ ನಡೆಸುವ ಬಗೆ ಎಂದುರು.

ಕರ್ಜಾಯ್, ಕುಫೋರ್, ನೈಜೀರಿಯಾದ ಜನರಲ್ ಒಬಾಸಂಜೋ, ನೇಪಾಳದ ಮಾಜಿ ಪ್ರಧಾನಿ ಮಾಧವ ಕೆ ನೇಪಾಳ್, ಭೂತಾನಿನ ರಾಣಿ ದೋರ್ಜ್ಗಿ ವಾಗ್ಮೋ ವಾಂಗ್ ಚುಕ್ ಸಮಾವೇಶದಲ್ಲಿ ಹಾಜರಿದ್ದ ಜಾಗತಿಕ ನಾಯಕರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com