೫೪೨೦ಕ್ಕೇರಿದ ಎಬೋಲ ಸಾವಿನ ಪ್ರಕರಣಗಳು: ವಿಶ್ವ ಆರೋಗ್ಯ ಸಂಸ್ಥೆ

ಡಿಸೆಂಬರ್ ೨೦೧೩ ರಿಂದ ಎಬೋಲಾ ವೈರಸ್ ಹರಡಿರುವ ೧೫೧೪೫ ಪ್ರಕರಣಗಳಲ್ಲಿ, ...
ಎಬೋಲಾ ವೈರಸ್ ತಪಾಸಣೆಗೊಳಗಾಗುತ್ತಿರುವ ಪ್ರಯಾಣಿಕರು
ಎಬೋಲಾ ವೈರಸ್ ತಪಾಸಣೆಗೊಳಗಾಗುತ್ತಿರುವ ಪ್ರಯಾಣಿಕರು
Updated on

ಜಿನೀವಾ: ಡಿಸೆಂಬರ್ ೨೦೧೩ ರಿಂದ ಎಬೋಲಾ ವೈರಸ್ ಹರಡಿರುವ ೧೫೧೪೫ ಪ್ರಕರಣಗಳಲ್ಲಿ, ೮ ದೇಶಗಳಾದ್ಯಂತ ೫೪೨೦ ಜನ ಸತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಶುಕ್ರವಾರದ ವೇಳೆಗೆ ವಿಶ್ವಸಂಸ್ಥೆಯ ಆರೋಗ್ಯ ಇಲಾಖೆ ೧೪೪೧೩ ಎಬೊಲಾ ಪ್ರಕರಣಗಳು ಮತ್ತು ೫೧೭೭ ಸಾವಿನ ಪ್ರಕರಣಗಳನ್ನು ಪ್ರಕಟಿಸಿದೆ.

ಈ ರೋಗ ಗಿನಿಯಾ, ಲೈಬೀರಿಯಾ ದೇಶಗಳಲ್ಲಿ ಹೆಚ್ಚು ಹರಡಿದೆ. ಲೈಬೀರಿಯಾದಲ್ಲಿ ಮಾತ್ರವೇ ೨೯೬೪ ಜನ ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಎಬೋಲಾ ಇತ್ತೀಚೆಗಷ್ಟೇ ಹರಡಿರುವ ಮಾಲಿ ದೇಶದಲ್ಲಿ ಆರು ಪ್ರಕರಣಗಳು ಕಂಡು ಬಂದಿದ್ದು ಅದರಲ್ಲಿ ಐವರು ಸಾವನ್ನಪ್ಪಿದ್ದಾರೆ.

ಸ್ಪೇನ್ ನಲ್ಲಿ ಒಂದು ಪ್ರಕರಣ ಬೆಳಕಿಗೆ ಬಂದಿದ್ದು, ಆದರೆ ಆ ನರ್ಸ್ ಈಗ ಗುಣವಾಗಿದ್ದಾರೆ ಎಂದು ತಿಳಿದು ಬಂದಿದೆ.

ಅಮೇರಿಕಾದಲ್ಲಿ ನಾಲ್ಕು ಪ್ರಕರಣಗಳು ಕಂಡು ಬಂದಿದ್ದು, ಭಾರತದಲ್ಲೂ ಒಂದು ಪ್ರಕರಣ ದಾಖಲಾಗಿತ್ತು.

ಮಾನವ ಕಂಡಿರುವ ಅತಿ ಅಪಾಯಕಾರಿ ವೈರಸ್ ಇದಾಗಿದ್ದು, ನೇರ ಸಂಪರ್ಕದೊಂದಿನ ಇದು ಹರಡುತ್ತದೆ. ವಿಪರೀತ ಜ್ವರ ಮತ್ತು ವಾಂತಿ ಈ ರೋಗದ ಪ್ರಮುಖ ಲಕ್ಷಣಗಳು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com