ಕೆಪಿಎಸ್ಸಿ ಅಕ್ರಮ: ಶುರುವಾಗಿದೆ ನಡುಕ

ಕೆಪಿಎಸ್ಸಿ
ಕೆಪಿಎಸ್ಸಿ

ಕೊಪ್ಪಳ: 1998 ಆಯ್ತು, ಈಗ 1999. ಕೆಪಿಎಸ್‌ಸಿಯಿಂದ 1998ರ ಬ್ಯಾಚ್ ನೇಮಕದಲ್ಲಿ ಆದ ಆಕ್ರಮಕ್ಕೆ ಶಿಕ್ಷೆಯಾಗಿರುವ ಬೆನ್ನಲ್ಲೇ ಈಗ 1999ರ ನೇಮಕದಲ್ಲೂ ಅಕ್ರಮದ ವಿರುದ್ಧ ಕ್ರಮ ಶುರುವಾಗಿದೆ.

ಈ ಸಂಬಂಧ ಸೇವೆಯಲ್ಲಿರುವ 192 ಅಧಿಕಾರಿಗಳಿಗೂ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ವಿಚಾರಣಾ ಪ್ರಕ್ರಿಯೆ ಮುಗಿದು, ಇಲ್ಲಿಯೂ ಅಕ್ರಮ ಸಾಬೀತಾದರೆ ಅವರೆಲ್ಲರ ವಿರುದ್ಧವೂ ಕ್ರಮ ಆಗುವ ಸಾಧ್ಯತೆ ಇದೆ. ಹೈಕೋರ್ಟ್ ರಚಿಸಿದ್ದ ಸತ್ಯಶೋಧನಾ ಸಮಿತಿ ವರದಿ ಆಧರಿಸಿಯೇ ಈ ಕ್ರಮ ಕೈಗೊಳ್ಳಲು ಮುಂದಾಗಿದೆ.

ಸತ್ಯ ಶೋಧನಾ ಸಮಿತಿ ವರದಿಯ ಪ್ರತಿ 'ಕನ್ನಡಪ್ರಭ'ಕ್ಕೆ ಲಭ್ಯವಾಗಿದ್ದು, ಆಯ್ಕೆಯಾಗಿರುವ ಅಭ್ಯರ್ಥಿಗೆ ನೀಡಿರುವ ನೋಟಿಸ್ ಪ್ರತಿಯೂ ಸಿಕ್ಕಿದೆ. ಹೀಗಾಗಿ, ಕ್ರಮ ಕೈಗೊಳ್ಳುವುದು ಪಕ್ಕಾ ಆಗಿದೆ. ಈ ಸಂಬಂಧ ಸತ್ಯಶೋಧನಾ ವರದಿಯನ್ನು ಜಾರಿಗೆ ತಡೆ ತರಲು ಕೆಲವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಮುಂದಾಗಿದ್ದಾರೆ.

ಗಡುವು: 1999ರಲ್ಲಿ ನೇಮಕವಾದವರೆಲ್ಲರೂ ತಮ್ಮ ನೇಮಕ ಕುರಿತು ಸತ್ಯಶೋಧನಾ ಸಮಿತಿಯ ವರದಿಯನ್ನಾಧರಿಸಿ ಕೇಳಲಾದ ಪ್ರಶ್ನೆಗಳಿಗೆ ಉತ್ತರವನ್ನು ಪ್ರಮಾಣ ಪತ್ರದ ರೂಪದಲ್ಲಿ ನವೆಂಬರ್ 10ರೊಳಗಾಗಿ ನೀಡುವಂತೆ ಗಡುವು ನೀಡಲಾಗಿತ್ತು. ಸೇವೆಯಲ್ಲಿರುವ 192 ಅಧಿಕಾರಿಗಳು ಪ್ರಮಾಣಪತ್ರ ನೀಡಿದ್ದಾರೆ. ಅದರ ವಿಚಾರಣೆಯ ದಿನಾಂಕ ನಿಗದಿಯಾಗಿಲ್ಲ. ಈ ವಿಚಾರಣೆ ಮುನ್ನವೇ ಸತ್ಯಶೋಧನಾ ವರದಿಯ ಕ್ರಮಕ್ಕೆ ತಡೆ ತರುವ ಪ್ರಯತ್ನ ನಡೆದಿದೆ.

ಏನೇನು ಅಕ್ರಮ?
ಅನರ್ಹರಿಗೆ ಸಂದರ್ಶನಕ್ಕೆ ಕರೆ
ಲಿಖಿತ ಪರೀಕ್ಷೆಯಲ್ಲಿ ಫಸ್ಟ್‌ಕ್ಲಾಸ್, ಸಂದರ್ಶನದಲ್ಲಿ ಫೇಲ್!
ನೇರ ಸಂದರ್ಶನಕ್ಕೆ ಹಾಜರಾಗದವರಿಗೂ ಅಂಕ
ಉತ್ತರ ಪತ್ರಿಕೆ ಅಂಕ ಕೂಡಿಸುವ ನೆಪದಲ್ಲಿ ಏರುಪೇರಾದ ಅಂಕಗಳು

ನನಗೂ ಅನ್ಯಾಯವಾಗಿದೆ. ನಾನು ಸತ್ಯಶೋಧನಾ ಸಮಿತಿ ವರದಿ ಆಧರಿಸಿ ಕೇಳಿದ ಪ್ರಶ್ನೆಗೆ ಪ್ರಮಾಣಪತ್ರ ಸಲ್ಲಿಸಿದ್ದೇನೆ. ವಿಚಾರಣೆಗೂ ಹಾಜರಾಗುತ್ತೇನೆ.
-1999ರಲ್ಲಿ ನೇಮಕವಾಗಿ ಸೇವೆಯಲ್ಲಿರುವಾತ

-ಸೋಮರಡ್ಡಿ ಅಳವಂಡಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com