
ಭುಬನೇಶ್ವರ್: ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ರಾಜ್ಯಸಭಾ ಸದಸ್ಯ ಹಾಗೂ ಬಿಜು ಜನತಾ ದಳದ (ಬಿಜೆಡಿ) ಮಾಜಿ ನಾಯಕ ಪ್ಯಾರಿಮೋಹನ್ ಮೊಹಾಪಾತ್ರ ಅವರಿಗೆ ಸಿಬಿಐ ಸಮನ್ಸ್ ಕಳುಹಿಸಿದೆ.
ಚಿಟ್ ಫಂಡ್ ಹಗರಣದ ಬಗ್ಗೆ ಒಡಿಶಾ ವಿಧಾನಸಭೆಯಲ್ಲಿ ವಿಪಕ್ಷ ಗದ್ದಲವೆಬ್ಬಿಸಿದ್ದು, ಎರಡನೇ ದಿನವೂ ಕಲಾಪ ಮುಂದೂಡಲಾಗಿದೆ.
ಮೊಹಾಪಾತ್ರ ಅವರನ್ನು ತನಿಖೆಗೊಳಪಡಿಸಿದ ಸಿಬಿಐ, ಗುರುವಾರ ಅವರ ನಿವಾಸದ ಮೇಲೆಯೂ ದಾಳಿ ನಡೆಸಿತ್ತು.
ಹಗರಣದಲ್ಲಿ ಸೀಶೋರ್ ಗ್ರೂಪ್ ಭಾಗಿಯಾಗಿದೆ ಎಂಬ ಆರೋಪದ ಮೇರೆಗೆ ಸಿಬಿಐ ಈ ದಾಳಿ ನಡೆಸಿತ್ತು. ಪ್ರಸ್ತುತ ಹಗರಣ ನಡೆದ ಅವಧಿಯಲ್ಲಿ ಮೊಹಾಪಾತ್ರ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಸಲಹೆಗಾರರಾಗಿದ್ದರು.
Advertisement