ಎಬೊಲಾ ವಿರುದ್ಧ ಹೋರಾಡಲು ಸಿಯೆರಾ ಲಿಯೋನ್ ಗೆ ಹೊರಟ ಬ್ರಿಟನ್ ಸ್ವಯಂಸೇವಕರು

ರಾಷ್ಟ್ರೀಯ ಆರೋಗ್ಯ ಸೇವೆಯ ಸ್ವಯಂಸೇವಕರ ಮೊದಲ ತಂಡ ಸಿಯೆರಾ ಲಿಯೋನ್ ಗೆ ಹೊರಟಿದೆ ...
ಚಿಕಿತ್ಸೆ ಪಡೆಯುತ್ತಿರುವ ಎಬೊಲ ರೋಗಿ (ಸಂಗ್ರಹ ಚಿತ್ರ)
ಚಿಕಿತ್ಸೆ ಪಡೆಯುತ್ತಿರುವ ಎಬೊಲ ರೋಗಿ (ಸಂಗ್ರಹ ಚಿತ್ರ)

ಫ್ರೀಟೌನ್, ಸಿಯೆರಾ ಲಿಯೋನ್: ರಾಷ್ಟ್ರೀಯ ಆರೋಗ್ಯ ಸೇವೆಯ ಸ್ವಯಂಸೇವಕರ ಮೊದಲ ತಂಡ ಸಿಯೆರಾ ಲಿಯೋನ್ ಗೆ ಹೊರಟಿದೆ ಎಂದು ಬ್ರಿಟನ್ ಸರ್ಕಾರ ತಿಳಿಸಿದೆ. ಅಲ್ಲಿ ಈ ತಂಡ ದೇಶದಾದ್ಯಂತ ಎಬೊಲಾ ಚಿಕಿತ್ಸಾ ಕೇಂದ್ರಗಳಲ್ಲಿ ಕೆಲಸ ಮಾಡಲಿದೆ ಎಂದಿದ್ದಾರೆ.

ಎಬೊಲಾ ಪ್ರಕರಣಗಳು ವಿಪರೀತ ಹೆಚ್ಚಳ ಕಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ಕೊಟ್ಟಿರುವ ಹಿನ್ನಲೆಯಲ್ಲೇ, ವಿಶ್ವದ ಸಂಪನ್ಮೂಲಗಳನ್ನು ಅಲ್ಲಿ ನಿಯೋಜಿಸುವಲ್ಲಿ ಇದು ಮೊದಲ ನಡೆ.

ಇತ್ತೀಚಿನ ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ ಪೂರ್ವ ಆಫ್ರಿಕಾ ದೇಶಗಳಲ್ಲಿ ಎಬೊಲಾ ಇಂದ ೫೪೦೦ ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಗಿನಿಯಾ, ಲೈಬೀರಿಯಾ ಮತ್ತು ಸಿಯೆರಾ ಲಿಯೋನ್ ನಲ್ಲಿ ಎಬೊಲಾ ವ್ಯಾಪಕವಾಗಿ ಹರಡಿದ್ದು, ಸಿಯೆರಾ ಲಿಯೋನ್ ಒಂದರಲ್ಲೇ ೧೨೦೦ ಜನ ಸಾವನ್ನಪ್ಪಿದ್ದಾರೆ.

ಡಾಕ್ಟರ್ ಗಳು, ನರ್ಸ್ ಗಳು ಸೇರಿದಂತೆ ೩೦ ರಾಷ್ಟ್ರೀಯ ಆರೋಗ್ಯ ಸೇವೆಯ ಸ್ವಯಂಸೇವಕರು ಇಂದು ಫ್ರೀಟೌನ್ ಗೆ ಹೊರಟಿದ್ದಾರೆ ಎಂದು ಬ್ರಿಟನ್ ನ ಅಂತರಾಷ್ಟ್ರೀಯ ಅಭಿವೃದ್ಧಿ ಸಚಿವಾಲಯ ತಿಳಿಸಿದೆ. ೧೦೦೦ ಕ್ಕೂ ಹೆಚ್ಚು ಜನ ಸ್ವಯಂ ಸೇವಕರಾಗಿ ಸೇವೆಗೆ ಮುಂದಾಗಿದ್ದಾರೆ ಎಂದು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com