
ನವದೆಹಲಿ: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ ೩೭೦ನೆ ವಿಧಿಯನ್ನು ವಜಾ ಮಾಡುವ ವಿಷಯವನ್ನು ಜಮ್ಮು ಕಾಶ್ಮೀರದ ಚುನಾವಣಾ ವಿಷಯವಾಗಿ ಚರ್ಚಿಸುವುದಿಲ್ಲ ಎಂದಿದ್ದಾರೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್. ಅಲ್ಲದೆ ಜನರಲ್ಲಿ ಭಯಭೀತಿ ಹುಟ್ಟಿಸಲು ವಿರೋಧ ಪಕ್ಷಗಳು ಈ ವಿಷಯವನ್ನು ಎತ್ತುತಿವೆ ಎಂದಿದ್ದಾರೆ.
"ಜಮ್ಮು ಕಾಶ್ಮೀರದಲ್ಲಿ ಚುನಾವಣೆ ಹತ್ತಿರದಲ್ಲಿದ್ದಾಗ ಜನರ ಮನಸ್ಸಿನಲ್ಲಿ ಭೀತಿ ಹುಟ್ಟಿಸಲು ವಿರೋಧ ಪಕ್ಷಗಳು ಪ್ರಯತ್ನಿಸುತ್ತಿವೆ. ವಿಧಾನಸಭಾ ಚುನಾವಣಾ ವೇಳೆಯಲ್ಲಿ ಈ ವಿಷಯವನ್ನು (ಸಂವಿಧಾನದ ೩೭೦ನೆ ವಿಧಿ) ಏಕೆ ಎತ್ತುತ್ತೀರ? ವಿಧಾನ ಸಭಾ ಚುನಾವಣೆಗಳಲ್ಲಿ ಉತ್ತಮ ಆಡಳಿತ, ಅಭಿವೃದ್ಧಿ ವಿಷಯಗಳು ಚರ್ಚೆಯಾಗಬೇಕು" ಎಂದು ಹಿಂದೂಸ್ತಾನ್ ಲೀಡರ್ ಶಿಪ್ ಸಭೆಯಲ್ಲಿ ಹೇಳಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಪ್ರತಿಯೊಂದು ವಿಷಯಗಳ ಬಗ್ಗೆ ಚರ್ಚೆಯಾಗಬೇಕೆಂದ ಸಿಂಗ್, ಈ ವಿಷಯ ಕೂಡ ರಾಜ್ಯಾದ್ಯಂತ ಹಾಗೂ ದೇಶಾದ್ಯಂತ ಚರ್ಚೆಯಾಗಬೇಕಿದೆ ಎಂದಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಭಧ್ರತಾ ಪಡೆಗಳ ವಿಶೇಷ ಅಧಿಕಾರ ನೀತಿಯನ್ನು (ಎ ಅಫ್ ಎಸ್ ಪಿ ಎ) ಹಂತಹಂತವಾಗಿ ಹಿಂಪಡೆಯುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ, ಅಂತಹ ಯಾವುದೇ ನಿರ್ಧಾರವನ್ನು ನಾವಿನ್ನೂ ತೆಗೆದುಕೊಂಡಿಲ್ಲ. ಎನ್ ಡಿ ಎ ಸರ್ಕಾರ ಜಮ್ಮು ಕಾಶ್ಮೀರದ ಪರಿಸ್ಥಿತಿಯನ್ನು ಇನ್ನೂ ಗಮನಿಸಲಿದೆ ಮತ್ತು ಕಾಯಲಿದೆ ಎಂದಿದ್ದಾರೆ.
Advertisement