ಟಿಒಐ-ಸಾಹಿತ್ಯೋತ್ಸವ: ತೀವ್ರ ವಿರೋಧದ ನಂತರ ತರುಣ್ ತೇಜಪಾಲ್ ಹೊರಕ್ಕೆ

ಅಂತರ್ಜಾಲದಲ್ಲಿ ಬಂದ ತೀವ್ರ ವಿರೋಧದಿಂದ, ರೇಪ್ ಆಪಾದಿತ ಸಂಪಾದಕ ತರುಣ್ ತೇಜಪಾಲ್...
ತರುಣ್ ತೇಜಪಾಲ್ (ಸಂಗ್ರಹ ಚಿತ್ರ)
ತರುಣ್ ತೇಜಪಾಲ್ (ಸಂಗ್ರಹ ಚಿತ್ರ)

ಮುಂಬೈ: ಅಂತರ್ಜಾಲದಲ್ಲಿ ಬಂದ ತೀವ್ರ ವಿರೋಧದಿಂದ, ರೇಪ್ ಆಪಾದಿತ ಸಂಪಾದಕ ತರುಣ್ ತೇಜಪಾಲ್ ಅವರನ್ನು ಟೈಮ್ಸ್ ಆಫ್ ಇಂಡಿಯಾ ಆಯೋಜಿಸುವ ಮುಂಬೈ ಸಾಹಿತೋತ್ಸವದಿಂದ ಕೈಬಿಡಲಾಗಿದೆ.

ಈ ಹಿಂದೆ ನಿಗದಿಯಾದಂತೆ, "ದ ಟೈರನಿ ಆಫ್ ಪವರ್" ಎಂಬ ಸಂವಾದದಲ್ಲಿ ತರುಣ್ ತೇಜಪಾಲ್ ಭಾಗವಹಿಸಬೇಕಿತ್ತು. ಆದರೆ ಈ ಸಾಹಿತ್ಯೋತ್ಸವದ ಆಯೋಜಕರ ವಿರುದ್ಧ ಟ್ವಿಟ್ಟರ್ ನಲ್ಲಿ ಅಸಂಖ್ಯಾತ ಜನರು ಕೋಪ ವ್ಯಕ್ತ ಪಡಿಸಿದ ಹಿನ್ನಲೆಯಲ್ಲಿ ತರುಣ್ ತೇಜಪಾಲ್ ಆಹ್ವಾನಿತರ ಪಟ್ಟಿಯಿಂದ ಹೊರಬಿದ್ದಿದ್ದಾರೆ.

ಸಾಹಿತ್ಯೋತ್ಸವದ ನಿರ್ದೇಶಕಿ ಬಾಚಿ ಕರ್ಕಾರಿಯ ಅವರು ನಾವು ಅತ್ಯುತ್ತಮ ಕಾರ್ಯಕ್ರಮ ಪಟ್ಟಿಯನ್ನು ಸಿದ್ಧಪಡಿಸಿದ್ದೇವೆ. ಈಗ ಅದು ತೀವ್ರ ಗದ್ದಲದಿಂದ ಹಾಳಾಗುವುದು ಬೇಡ. ಆದುದರಿಂದ ತರುಣ್ ತೇಜಪಾಲ್ ಅವರನ್ನು ಕೈಬಿಟ್ಟಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com