ಕಾಶ್ಮೀರ ಹತ್ಯೆಯಲ್ಲಿ ೯ ಸೈನಿಕರು ಆಪಾದಿತರು

ನವೆಂಬರ್ ೩ ರಂದು ಜಮ್ಮು ಕಾಶ್ಮೀರದ ಬುಡ್ಗಾಮ್ ಜಿಲ್ಲೆಯಲ್ಲಿ ಇಬ್ಬರು ಯುವಕರನ್ನು ಕೊಂದದಕ್ಕೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶ್ರೀನಗರ: ನವೆಂಬರ್ ೩ ರಂದು ಜಮ್ಮು ಕಾಶ್ಮೀರದ ಬುಡ್ಗಾಮ್ ಜಿಲ್ಲೆಯಲ್ಲಿ ಇಬ್ಬರು ಯುವಕರನ್ನು ಕೊಂದದಕ್ಕೆ ೯ ಜನ ಸೈನಿಕರನ್ನು ಆಪಾದಿತರೆಂದು ಪರಿಗಣಿಸಲಾಗಿದ್ದು ಕೋರ್ಟ್ ಮಾರ್ಷಲ್ ಎದುರಿಸಲಿದ್ದಾರೆ ಎಂದು ಸೇನೆ ಗುರುವಾರ ತಿಳಿಸಿದೆ.

"ಕಿರಿಯ ಆಯುಕ್ತರು ಒಳಗೊಂಡಂತೆ ೫೩ ರಾಷ್ಟ್ರೀಯ ರೈಫಲ್ಸ್ ದಳದ ೯ ಜನ ಸೈನಿಕರು ಚತ್ತೆಗ್ರಾಂ ಪ್ರದೇಶದಲ್ಲಿ ಗುಂಡು ಹಾರಿಸಿ ಇಬ್ಬರು ಯುವಕರ ಸಾವಿಗೆ ಕಾರಣವಾದದ್ದರಿಂದ ಆಪಾದಿತರೆಂದು ಪರಿಗಣಿಸಲಾಗಿದೆ. ವಿಚಾರಣೆ ನಡೆಸಿದ ನ್ಯಾಯಾಲಯ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಸೈನಿಕರ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದಿದೆ. ಆದುದರಿಂದ ಅವರನ್ನು ಆಪಾದಿತರೆಂದು ಪರಿಗಣಿಸಲಾಗಿದೆ. ಈ ತಂಡವನ್ನು ಮುನ್ನಡೆಸುತ್ತಿದ್ದ ಕಾಮಾಂಡರ್ ಸಂಪೂರ್ಣ ವಿಫಲರಾಗಿದ್ದಾರೆ" ಎಂದು ಸೇನೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಫೈಸಲ್ ಯೂಸುಫ್ ಭಟ್ ಮತ್ತು ಮೆಹ್ರಜುದ್ದೀನ್ ದಾರ ಅವರನ್ನು ನವೆಂಬರ್ ೩ ರಂದು ವಾಹನ ತಪಾಸಣಾ ವೇಳೆಯಲ್ಲಿ ಈ ಸೈನಿಕರು ಕೊಂದಿದ್ದರು. ಇದರಿಂದ ಕಾಶ್ಮೀರ ಜನತೆಯ ಆಕ್ರೋಶ ಮುಗಿಲುಮುಟ್ಟಿತ್ತು.

ಈ ಮೊದಲು ಸೇನೆ, ಪ್ರಯಾಣ ಮಾಡುತ್ತಿದ್ದ ಆ ಯುವಕರು ಭದ್ರತಾ ತಪಾಸಣೆಗೆ ನಿಲ್ಲಿಸಿರಲಿಲ್ಲ ಎಂದಿದ್ದರು. ಆನಂತರ ಗುಂಡು ಹಾರಿಸುವಾಗ ಪಾಲಿಸಬೇಕಿದ್ದ ನಿಯಮಗಳನ್ನು ಉಲ್ಲಂಘಿಸಿದ್ದನ್ನು ಸೇನೆ ಒಪ್ಪಿಕೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com