೫೦ ಲಕ್ಷ ಚಂದಾ ಎತ್ತಿದ ಆಪ್, ವ್ಯಾಟ್ ಸುಧಾರಣೆಯ ಭರವಸೆ ನೀಡಿದ ಕೇಜ್ರಿವಾಲ್

ಫೆಬ್ರವರಿಯಲ್ಲಿ ನಡೆಯಬಹುದಾದ ದೆಹಲಿ ವಿಧಾನಸಭಾ ಚುನಾವಣೆಗೂ ಮುಂಚೆ ...
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್
Updated on

ನವದೆಹಲಿ: ಫೆಬ್ರವರಿಯಲ್ಲಿ ನಡೆಯಬಹುದಾದ ದೆಹಲಿ ವಿಧಾನಸಭಾ ಚುನಾವಣೆಗೂ ಮುಂಚೆ ಪಕ್ಷದ ವ್ಯಾಪಾರಿಗಳ ವಿಭಾಗ ಆಯೋಜಿಸಿದ್ದ ಪಕ್ಷದ ನಿಧಿ ಸಂಗ್ರಹ ಔತಣಕೂಟದಲ್ಲಿ ಭಾನುವಾರ ಎಎಪಿ ಪಕ್ಷ ೫೦ಲಕ್ಷ ರೂ ಸಂಗ್ರಹಿಸಿದೆ.

ಬೇರೆ ರಾಜ್ಯಗಳಿಗಿಂತ ಮೌಲ್ಯಾಧಾರಿತ ತೆರಿಗೆ ಹೆಚ್ಚಿರುವ ವಸ್ತುಗಳ ಮೇಲಿನ ತೆರಿಗೆಯನ್ನು ಇಳಿಸಿ ವ್ಯಾಟ್ ಮೇಲೆ ಸುಧಾರಣೆ ತರುವುದಾಗಿ ಪಕ್ಷದ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್ ಔತಣ ಕೂಟದ ನಂತರ ತಿಳಿಸಿದ್ದಾರೆ.

ರಾಜಧಾನಿಯ ವಿವಿಧ ಭಾಗಗಳಿಂದ ಸುಮಾರು ೧೨೫ ವ್ಯಾಪಾರಿಗಳು ಔತಣಕೂಟದಲ್ಲಿ ಭಾಗವಹಿಸಿದ್ದರು. ಪ್ರತಿ ಊಟಕ್ಕೂ ೨೦ ಸಾವಿರ ರೂ ನಿಗದಿ ಪಡಿಸಲಾಗಿತ್ತು. ಈ ಹಿಂದೆ ಮುಂಬೈನಲ್ಲಿ ಇದೇ ರೀತಿಯ ಔತಣಕೂಟವನ್ನು ಏರ್ಪಡಿಸಿದ್ದ ಆಪ್ ಪಕ್ಷ ೯೧ ಲಕ್ಷ ಸಂಗ್ರಹಿಸಿತ್ತು.

ಪಕ್ಷದ ದೆಹಲಿಯ ಮುನ್ನೋಟವನ್ನು ವಿವರಿಸಿದ ಅರವಿಂದ ಕೇಜ್ರಿವಾಲ್, "ಆಪ್ ಪಕ್ಷ ದೆಹಲಿಯನ್ನು ವ್ಯಾಪಾರಿ ಶಕ್ತಿ ಕೇಂದ್ರವನ್ನಾಗಿ ಪರಿವರ್ತಿಸಿ ವ್ಯಾಪಾರಿ ಸ್ನೇಹಿ ಪರಿಸರವನ್ನು ನಿರ್ಮಿಸುತ್ತೇವೆ" ಎಂಬ ಭರವಸೆ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com