
ನವದೆಹಲಿ: ಯುಪಿಎ ಸರ್ಕಾರದ ಹಾದಿಯಲ್ಲೇ ಹೆಜ್ಜೆ ಇಟ್ಟಿರುವ ಎನ್ ಡಿ ಎ ಸರ್ಕಾರ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಾವಿಗೆ ಸಂಬಂಧಿಸಿದ ದಾಖಲೆಗಳನ್ನು ಸಾರ್ವಜನಿಕಗೊಳಿಸುವುದಕ್ಕೆ ನಿರಾಕರಿಸಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ, "ಈ ದಾಖಲೆಗಳನ್ನು ಬಿಡುಗಡೆ ಮಾಡಿದರೆ, ವಿದೇಶಗಳ ಜೊತೆ ಭಾರತದ ಸಂಬಂಧಕ್ಕೆ ಧಕ್ಕೆ ಬರುತ್ತದೆ" ಎಂಬ ಕಾರಣ ಕೊಟ್ಟು ದಾಖಲೆಗಳ ಬಿಡುಗಡೆಗೆ ಪ್ರಧಾನ ಮಂತ್ರಿ ಕಾರ್ಯಾಲಯ ನಿರಾಕರಿಸಿದೆ.
ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿರುವ ನಾಲ್ಕು ಪ್ರಮುಖ ರಹಸ್ಯ ಕಡತಗಳು, ನೇತಾಜಿ ಮತ್ತು ಅವರ ಮಗಳ ಜೊತೆ ನಡೆದಿದ್ದ ಮಾತುಕತೆ, ನೇತಾಜಿ ಅವರ ಬೂಧಿಯನ್ನು ಭಾರತಕ್ಕೆ ತಂದದ್ದು ಹಾಗೂ ನ್ಯಾಯಮೂರ್ತಿ ಮುಖರ್ಜೀ ಸಮಿತಿ ನೇತಾಜಿ ಅವರ ಸಾವಿನ ಬಗ್ಗೆ ನಡೆಸಿದ ತನಿಖೆಯ ಎರಡು ಕಡತಗಳು ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ಹೇಳಿದೆ.
ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದ ಅರ್ಜಿದಾರ ಸುಭಾಷ್ ಅಗರವಾಲ್ ಅವರು "ರಹಸ್ಯ ಕಾಪಾಡುವುದಕ್ಕಿಂತ ಜನರಿಗೆ ನಿಜಾಂಶ ಗೊತ್ತು ಮಾಡುವುದು ಮುಖ್ಯ" ಎಂದಿದ್ದಾರೆ.
Advertisement