
ಬೆಂಗಳೂರು: ಭಯೋತ್ಪಾದನೆ ನಿರ್ಮೂಲನೆ ಉದ್ದೇಶದಿಂದ ಜಾಗತಿಕ ಸಮಗ್ರ ನೀತಿಗೆ ಮುಕ್ತವಾಗಿರುವ, ಪೂರ್ವಭಾವಿಯಾಗಿ ಕಾರ್ಯನಿರ್ವಹಿಸುವ, ಮಾನವ ಸಂಬಂಧಗಳಿಗೆ ಮಹತ್ವ ನೀಡುವ ವಿದೇಶಾಂಗ ನೀತಿಯ ಕರಡಿಗೆ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಅನುಮೋದನೆ ನೀಡಿದೆ.
`ಸಮ್ಮಾನ್, ಸಂವಾದ್, ಸಮೃದ್ಧಿ, ಸುರಕ್ಷಾ, ಸಂಸ್ಕೃತಿ-ಸಭ್ಯತಾ' ಎಂಬ ಪಂಚಾಮೃತದ ಅಡಿಗಲ್ಲಿನ ಮೇಲೆ ವಿದೇಶಾಂಗ ನೀತಿಯನ್ನು ರೂಪಿಸಲಾಗಿದೆ. ನಿರ್ಭೀತ, ಪೂರ್ವಭಾವಿ, ನವೀನವಾದ ನೀತಿ ಇದಾಗಿದ್ದು, ಯಾವುದೇ ರೀತಿಯಲ್ಲೂ ಭಯೋತ್ಪಾದನೆಗೆ ಅವಕಾಶ ನೀಡದ ದೃಢ ನೀತಿಗೆ ಕಾರ್ಯಕಾರಿಣಿ ಸಮ್ಮತಿ ನೀಡಿದೆ ಎಂದು ಖ್ಯಾತ ಪತ್ರಕರ್ತ, ಬಿಜೆಪಿ ರಾಷ್ಟ್ರೀಯ ವಕ್ತಾರ ಎಂ.ಜೆ.ಅಕ್ಬರ್ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.
ರಾಷ್ಟ್ರೀಯ ಆರ್ಥಿಕತೆ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜಾಗತಿಕ ಜವಾಬ್ದಾರಿಯನ್ನು ಹೊಂದಿರುವ ಈ ವಿದೇಶಾಂಗ ನೀತಿಯನ್ನು, ಎಲ್ಲರನ್ನೂ ಸಮ್ಮಾನಿಸುವ, ಎಲ್ಲೂ ಸಮೃದ್ಧಿವಾಗುವ, ಸುರಕ್ಷೆ ನೀಡುವ, ಸಂಸ್ಕೃತಿಯನ್ನು ವಿವರಿಸುವ ಅಂಶಗಳಲ್ಲಿ ರೂಪಿಸಲಾಗಿದೆ. ಸ್ನೇಹತನದ ಸಂಪರ್ಕ ಜಾಲವನ್ನು ಸೃಷ್ಟಿಸುವ ಜತೆಗೆ ಶಾಂತಿ, ಪಾಲುದಾರಿಕೆ, ಸಮೃದಿಟಛಿಯ ಆಶಯದೊಂದಿಗೆ ಮೇಕ್ ಇನ್ ಇಂಡಿಯಾದ ಪರಿಕಲ್ಪನೆಯೊಂದಿಗೆ ವಿದೇಶಾಂಗ ನೀತಿ ರಚನೆಯಾಗಿದೆ ಎಂದರು.
ಭಾರತ ಧ್ರುವತಾರೆ
ವಿಶ್ವದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾರತ `ಧ್ರುವತಾರೆ'ಯಾಗಿ ಹೊರಹೊಮ್ಮಿದೆ. ಎನ್‍ಡಿಎ ಸರ್ಕಾರ ಅಧಿಕಾರಿಕ್ಕೆ ಬಂದಿರುವ 10 ತಿಂಗಳಲ್ಲೇ 94 ದೇಶಗಳೊಂದಿಗೆ ಸಮನ್ವಯ ಸಾಧಿಸಿದೆ. ನೇಪಾಳ, ಶ್ರೀಲಂಕ ದೇಶಗಳಿಗೆ ದಶಕಗಳಿಂದ ಪ್ರಧಾನಿಗಳು ಹೋಗಿರಲಿಲ್ಲ. ದನ್ನು ನರೇಂದ್ರ ಮೋದಿ ಮಾಡಿದ್ದಾರೆ. ಇಂತಹ ನಿಟ್ಟಿನಲ್ಲಿವ ವಿದೇಶಾಂಗ ನೀತಿ ನಮ್ಮ ನೆರೆ-ಹೊರೆ ರಾಷ್ಟ್ರಗಳ ಸಂಬಂಧಕ್ಕೂ ಪೂರಕವಾಗಿದೆ ಎಂದರು. ನೆರೆಯ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ಈಗಾಗಲೇ ರವಾನೆಯಾಗಿದ್ದು, ಭಯೋತ್ಪಾದನೆಗೆ ಮಂಗಳ ಹಾಡಿ. ಭಯೋತ್ಪಾದನೆಯೊಂದಿಗೆ ಯಾವುದೇ ರೀತಿಯ ರಾಜಿ ಇಲ್ಲ. ಯಾವುದೇ ರೀತಿಯ ದ್ವಿಮುಖ ನೀತಿಗೂ ಅವಕಾಶ ಇಲ್ಲ. ಭಯೋತ್ಪಾದನೆ ಮತ್ತು ಮಾತುಕತೆ ಎರಡೂ ಒಂದೇ ಸಮಯದಲ್ಲಿ ನಡೆಯಲು ಸಾಧ್ಯವಿಲ್ಲ. ರಾಷ್ಟ್ರೀಯ ಹಿತಾಸಕ್ತಿಯನ್ನು ಯಾವುದೇ ಕಾರಣಕ್ಕೂ ಬಲಿಕೊಡುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ ಎಂದರು. ಈ ಎಲ್ಲ ವಿಷಯಗಳನ್ನು ಜಮ್ಮು-ಕಾಶ್ಮೀರದಲ್ಲಿ ನಮ್ಮ ರಾಜಕೀಯ ಮೈತ್ರಿ ಹೊಂದಿರುವವರಿಗೂ ಅರಿವಿದೆ. ಭಯೋತ್ಪಾದನೆ ಬಗ್ಗೆ ನಮ್ಮ ದೃಢ ನಿಲುವಿನ ಬಗ್ಗೆಯೂ ನಮ್ಮ ಮೈತ್ರಿ ಪಕ್ಷದವರು ಅರ್ಥೈಸಿಕೊಂಡಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
Advertisement