ಸ್ಮೃತಿ ಇರಾನಿ ಟ್ರಯಲ್ ರೂಂನಲ್ಲಿ ಕ್ಯಾಮೆರಾ ಪತ್ತೆ: ಫ್ಯಾಬ್ ಇಂಡಿಯಾ ಅಧಿಕಾರಿಗಳ ವಿಚಾರಣೆ ಸಾಧ್ಯತೆ

ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿಯವರು ಟ್ರಯಲ್ ರೂಂನಲ್ಲಿ ರಹಸ್ಯೆ ಕ್ಯಾಮೆರಾ ಪತ್ತೆ ಹಚ್ಚಿದ ಪ್ರಕರಣ ಸಂಬಂಧ ಗೋವಾ ಅಪರಾಧ ವಿಭಾಗದ...
ಫ್ಯಾಬ್ ಇಂಡಿಯಾ ಮಳಿಗೆಯಿಂದ ಹೊರಬರುತ್ತಿರುವ ಸ್ಮೃತಿ ಇರಾನಿ
ಫ್ಯಾಬ್ ಇಂಡಿಯಾ ಮಳಿಗೆಯಿಂದ ಹೊರಬರುತ್ತಿರುವ ಸ್ಮೃತಿ ಇರಾನಿ

ಪಣಜಿ: ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿಯವರು ಟ್ರಯಲ್ ರೂಂನಲ್ಲಿ ರಹಸ್ಯೆ ಕ್ಯಾಮೆರಾ ಪತ್ತೆ ಹಚ್ಚಿದ ಪ್ರಕರಣ ಸಂಬಂಧ ಗೋವಾ ಅಪರಾಧ ವಿಭಾಗದ ಪೊಲೀಸರು ಶನಿವಾರ ಫ್ಯಾಬ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ವಿಲಿಯಂ ಬಿಸೆಲ್ ಸೇರಿದಂತೆ ಹಿರಿಯ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

'ಫ್ಯಾಬ್ ಇಂಡಿಯಾದ ಎಲ್ಲಾ ಹಿರಿಯ ಅಧಿಕಾರಿಗಳನ್ನು ನಾವು ವಿಚಾರಣೆ ನಡೆಸುತ್ತೇವೆ' ಎಂದು ಅಪರಾಧ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ಕಷ್ಯಪ್ ಅವರು ಹೇಳಿದ್ದಾರೆ.

ಪ್ರಕರಣ ಸಂಬಂಧ ಈಗಾಗಲೇ ನಾಲ್ವರನ್ನು ವಶಕ್ಕೆ ಪಡೆದಿರುವ ಗೋವಾ ಪೊಲೀಸರು, ಅವರಿಂದ ಕೆಲವು ಆಕ್ಷೇಪಾರ್ಹ ಪೋಟೋಗಳನ್ನು ಮತ್ತು ಸಿಸಿಟಿವಿ ಕ್ಯಾಮೆರಾ, ಕಂಪ್ಯೂಟರ್ ಮತ್ತು ಹಾರ್ಡ್‌ಡಿಸ್ಕ್ ಅನ್ನು ವಶಪಡಿಸಿಕೊಂಡಿದ್ದಾರೆ.

ಗೋವಾ ಪ್ರವಾಸದಲ್ಲಿರುವ ಸ್ಮೃತಿ ಇರಾನಿ ಅವರು ಕಾಂದೋಳಿಂನಲ್ಲಿನ ಫ್ಯಾಬ್ ಇಂಡಿಯಾ ಮಳಿಗೆಯಲ್ಲಿ ಶುಕ್ರವಾರ ಬಟ್ಟೆ ಖರೀದಿಸಿ ಡ್ರೆಸಿಂಗ್ ರೂಂಗೆ ತೆರಳಿದ್ದರು. ಈ ವೇಳೆ ಅಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿದ್ದು ಕಂಡು ಬಂತು. ಈ ಬಗ್ಗೆ ಅವರು ಮಳಿಗೆಯ ಮ್ಯಾನೇಜರ್ ಅನ್ನು ಪ್ರಶ್ನಿಸಿದ್ದಾರೆ. ಅಲ್ಲದೆ ಕಲಂಘೂಟ್ ಬಿಜೆಪಿ ಶಾಸಕ ಮೈಕೆಲ್ ಲೋಬೋಗೆ ಫೋನ್ ವಿಷಯ ತಿಳಿಸಿದ್ದರು. ಬಳಿಕ ಪೊಲೀಸರಿಗೆ ದೂರು ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com