ದನದ ಮಾಂಸದ ರಫ್ತನ್ನು ನಿಷೇಧಿಸಿ: ಕೇಂದ್ರಕ್ಕೆ ಅಜಂ ಖಾನ್ ಆಗ್ರಹ

ಬಿಜೆಪಿ ನಾಯಕತ್ವದ ಕೇಂದ್ರ ಸರ್ಕಾರ ದನದ ಮಾಂಸದ ರಫ್ತಿನ ಮೇಲೆ ನಿಷೇಧ ಹೇರಿದರೆ ಹಸುಗಳನ್ನು ಕೊಲ್ಲುವುದು ನಿಲ್ಲುತ್ತದೆ ಎಂದು ಸಮಾಜವಾದಿ ಪಕ್ಷದ ಮುಖಂಡ
ಅಜಂ ಖಾನ್
ಅಜಂ ಖಾನ್

ಮಥುರಾ: ಬಿಜೆಪಿ ನಾಯಕತ್ವದ ಕೇಂದ್ರ ಸರ್ಕಾರ ದನದ ಮಾಂಸದ ರಫ್ತಿನ ಮೇಲೆ ನಿಷೇಧ ಹೇರಿದರೆ ಹಸುಗಳನ್ನು ಕೊಲ್ಲುವುದು ನಿಲ್ಲುತ್ತದೆ ಎಂದು ಸಮಾಜವಾದಿ ಪಕ್ಷದ ಮುಖಂಡ ಮತ್ತು ಉತ್ತರ ಪ್ರದೇಶ ಸರ್ಕಾರದ ಸಂಪುಟ ಸಚಿವ ಅಜಂ ಖಾನ್ ಹೇಳಿದ್ದಾರೆ.

"ಕೇಂದ್ರ ಸರ್ಕಾರ ದನದ ಮಾಂಸದ ರಫ್ತಿನ ಮೇಲೆ ನಿಷೇಧ ಹೇರಿದರಷ್ಟೇ ಹಸುಗಳನ್ನು ಕೊಲ್ಲುವುದು ನಿಲ್ಲುವುದು" ಎಂದು ಗೋವರ್ಧನ ಪೀಠಾಧೀಶ್ವರ ಸ್ವಾಮಿ ಅಧೋಕ್ಷಾಜಾನಂದ ಪ್ರಾರಂಭಿಸಿರುವ ಗೋವರ್ಧನ ನಗರ ಗೋಶಾಲದ ಉದ್ಘಾಟನಾ ಸಮಾರಂಭದಲ್ಲಿ ಅಜಂ ಖಾನ್ ಹೇಳಿದ್ದಾರೆ.

ಹಾಗೆಯೇ ಪಂಚತಾರಾ ಹೋಟೆಲ್ ಗಳ ಊಟದ ಪಟ್ಟಿಯಲ್ಲಿ ದನದ ಮಾಂಸವನ್ನು ನಿಷೇಧಿಸುವಂತೆ ಸರ್ಕಾರಕ್ಕೆ ಕರೆ ಕೊಟ್ಟಿದ್ದಾರೆ.

ಮತಧರ್ಮ ಎಂದಿಗೂ ದ್ವೇಷ ಬಿತ್ತುವುದಿಲ್ಲ ಎಂದಿರುವ ಅವರು "ಮನುಷ್ಯ ಮನುಷ್ಯರ ಬಗ್ಗೆ ದ್ವೇಷ ಹಬ್ಬಿಸುವುದನ್ನು ಮತಧರ್ಮ ಎನ್ನಲಾಗುವುದಿಲ್ಲ" ಎಂದಿದ್ದಾರೆ.

ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಅವರು ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರನ್ನು "ಪ್ರಜಾಪ್ರಭುತ್ವದ ಅತಿ ದೊಡ್ಡ ಶತ್ರು" ಎಂದು ಕರೆದಿದ್ದು, ಅವರ ಆಡಳಿತದ ಸಮಯದಲ್ಲಿ ಉತ್ತರಪ್ರದೇಶದ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿತ್ತು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com