
ನವದೆಹಲಿ: ಚುನಾವಣಾ ಮಹಾನಿರ್ದೇಶಕ ನಸೀಮ್ ಜೈಯ್ದಿ ಅವರನ್ನು ಮುಂದಿನ ಮುಖ್ಯ ಚುನಾವಣ ಮಹಾನಿರ್ದೇಶಕರಾಗಿ ನೇಮಕ ಮಾಡಲಾಗಿದೆ.
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಈ ನೇಮಕಕ್ಕೆ ಸಹಿ ಹಾಕಿದ್ದಾರೆ ಎಂದು ಕಾನೂನು ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.
ಈ ನೇಮಕ ಏಪ್ರಿಲ್ ೧೯ ನೆ ತಾರೀಖಿನಿಂದ ಜಾರಿಗೆ ಬರಲಿದ್ದು ಇವರು ಹರಿ ಶಂಕರ್ ಬ್ರಹ್ಮ ಅವರನ್ನು ಬದಲಾಯಿಸಲಿದ್ದಾರೆ,
ಜುಲೈ ೨೦೧೭ ರವರೆಗೆ ಅವರ ಅವಧಿ ಮುಂದುವರೆಯಲಿದೆ.
ಈಗ ಸದ್ಯದ ಮೂರು ಸದಸ್ಯರ ಸಾಂವಿಧಾನಕ ಸಮಿತಿ ಚುನಾವಣಾ ಆಯೋಗಯಲ್ಲಿ ಇವರೊಬ್ಬರೇ ಉಳಿಯುವುದು. ವಿ ಸಂಪತ್ ಆಗಲೇ ನಿವೃತ್ತಿಯಾಗಿದ್ದು, ಹರಿ ಶಂಕರ್ ಬ್ರಹ್ಮ ಕೂಡ ಶೀಘ್ರದಲ್ಲೇ ನಿವೃತ್ತಿಯಾಗಲಿದ್ದಾರೆ.
೧೯೭೬ ಬ್ಯಾಚಿನ ಐ ಎ ಎಸ್ ಅಧಿಕಾರಿ ಜೈಯ್ದಿ, ನಾಗರಿಕ ವಿಮಾನಯಾನ ಇಲಾಖೆಯಲ್ಲಿ ದೀರ್ಘ ಕಾಲದವರೆಗೆ ಕೆಲಸ ಮಾಡಿದ್ದಾರೆ.
Advertisement