ಖ್ಯಾತ ತಮಿಳು ಸಾಹಿತಿ ಡಿ ಜಯಕಾಂತನ್ ವಿಧಿವಶ

೫ನೆ ಕ್ಲಾಸು ನಪಾಸಾದ, ಅಸಂಪ್ರದಾಯಿಕ ವ್ಯಕ್ತಿತ್ವದ, ರಿಕ್ಷಾ ಎಳೆಯುವವರ, ವೇಶ್ಯೆಯರ ಕಥೆಗಳನ್ನು ತಮಿಳು ಸಾಹಿತ್ಯದ ಪುಟಗಳಿಗೆ ತಂದ ಖ್ಯಾತ ಸಾಹಿತಿ
ಡಿ ಜಯಕಾಂತನ್
ಡಿ ಜಯಕಾಂತನ್
Updated on

ಚನ್ನೈ: ೫ನೆ ಕ್ಲಾಸು ನಪಾಸಾದ, ಅಸಂಪ್ರದಾಯಿಕ ವ್ಯಕ್ತಿತ್ವದ, ರಿಕ್ಷಾ ಎಳೆಯುವವರ, ವೇಶ್ಯೆಯರ ಕಥೆಗಳನ್ನು ತಮಿಳು ಸಾಹಿತ್ಯದ ಪುಟಗಳಿಗೆ ತಂದ ಖ್ಯಾತ ಸಾಹಿತಿ ಡಿ ಜಯಕಾಂತನ್ ಬುಧವಾರ ತಡರಾತ್ರಿ ಅಸುನೀಗಿದ್ದಾರೆ. ಪದ್ಮಭೂಷಣ, ಜ್ಞಾನಪೀಠ, ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಿ ಜಯಕಾಂತನ್ ಅವರಿಗೆ ೮೧ ವರ್ಷ ಆಗಿತ್ತು. ಅವರು ತಮ್ಮ ಪತ್ನಿ, ಮಗಳು ಮತ್ತು ಮಗನನ್ನು ಅಗಲಿದ್ದಾರೆ.

ಸಣ್ಣ ವಯಸ್ಸಿಗೆ ಕ್ರಾಂತಿಕಾರಕ ಚಿಂತಕರಾದ ಜಯಕಾಂತನ್ ತಮ್ಮ ಸಾಹಿತ್ಯದಿಂದ ತಮಿಳುನಾಡಿನ ಸಾಹಿತ್ಯ ವಲಯವದಲ್ಲೇ ಸಂಚಲನ ಮೂಡಿಸಿದ್ದರು. ಅವರ ಕಾದಂಬರಿ, ಕಿರು ಕಾದಂಬರಿಗಳು, ಕಥೆಗಳು ಅತೀವ ಜನಪ್ರಿಯತೆ ಪಡೆದಿದ್ದವು. ಅರ್ಧ ಶತಮಾನದ ತಮ್ಮ ಸಾಹಿತ್ಯ ಜೀವನದಲ್ಲಿ ಜಯಕಾಂತನ್ ೧೫ ಕಾದಂಬರಿಗಳು, ೩೦ ಕಿರು ಕಾದಂಬರಿಗಳು, ೨೦೦ ಸಣ್ಣ ಕಥೆಗಳನ್ನೊಳಗೊಂಡ ೧೫ ಕಥಾ ಸಂಕಲನಗಳು ಮತ್ತು ೨೦ ಪ್ರಬಂಧ ಸಂಕಲನಗಳನ್ನು ಬರೆದ ಅಪರೂಪದ ಸಾಹಿತಿ. ೨೦೦೨ ರಲ್ಲಿ ಜ್ಞಾನಪೀಠ ಮತ್ತು 2009 ರಲ್ಲಿ ಪದ್ಮಭೂಷಣ ಜಯಕಾಂತನ್ ಅವರಿಗೆ ಒಲಿದು ಬಂದಿತ್ತು.

ಸಾಮನ್ಯವಾಗಿ ಸಾಮಾನ್ಯ ಮನುಷ್ಯನ ಜೀವನವೇ ಜಯಕಾಂತನ್ ಅವರ ಕಥೆ ಕಾದಂಬರಿಗಳಿಗೆ ವಸ್ತುವಾಗಿರುತ್ತಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com