ಲಿವಿಂಗ್ ಟುಗೆದರ್ ಜೋಡಿ ಕಾನೂನು ಪ್ರಕಾರ ವಿವಾಹಿತರು: ಸುಪ್ರೀಂ

ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ಅವಿವಾಹಿತ ಪುರುಷ ಮತ್ತು ಮಹಿಳೆ ದೀರ್ಘ ಕಾಲದಿಂದ ಒಟ್ಟಿಗೆ ಪತಿ-ಪತ್ನಿಯಂತೆ ವಾಸಿಸುತ್ತಿದ್ದರೆ ಅವರನ್ನು ಕಾನೂನು ಪ್ರಕಾರ ವಿವಾಹಿತರೆಂದು ಪರಿಗಣಿಸತಕ್ಕದ್ದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಮದುವೆಯಾಗದ ಪುರುಷ-ಮಹಿಳೆ ದೀರ್ಘಕಾಲದಿಂದ ಜತೆಯಾಗಿ ವಾಸಿಸುತ್ತಿದ್ದ ಪಕ್ಷದಲ್ಲಿ ಅವರನ್ನು ವಿವಾಹಿತರೆಂದು ಪರಿಗಣಿಸಬೇಕು ಮತ್ತು ಜತೆಗಾರನ ಮರಣಾನಂತರ ಮಹಿಳೆಗೆ ಆತನ ಆಸ್ತಿಯಲ್ಲಿ ಹಕ್ಕು ದೊರೆಯುತ್ತದೆ ಎಂದು ಕೋರ್ಟ್ ಹೇಳಿದೆ.

ಜತೆಗೂಡಿ ವಾಸಿಸುವ ಜೋಡಿಯ ಸಂಬಂಧವನ್ನು ವಿವಾಹಿತರ ಸಂಬಂಧವೆಂದೇ ಕಾಣಬೇಕಾಗದುತ್ತಯೇ ಹೊರತು ಅನೈತಿಕ ಸಂಬಂಧವೆಂದು ಪರಿಗಣಿಸಲಾಗದು ಎಂದಿರುವ ನ್ಯಾ.ವೈ.ಇಕ್ಬಾಲ್ ಮತ್ತು ನ್ಯಾ. ಅಮಿತಾಭ್ ರಾಯ್ ಅವರನ್ನೊಳಗೊಂಡ ಪೀಠ, ಒಂದು ಇದನ್ನು ಪ್ರಶ್ನಿಸುವ ಪ್ರತಿವಾದಿಗಳೇ ಆ ಜೋಯಿ ಸಂಬಂಧ ಕಾನೂನು ಬಾಹಿರವೆಂಬುದನ್ನು ಸಾಕ್ಷ್ಯಾಧಾರ ಸಹಿತವಾಗಿ ಸಾಬೀತು ಮಾಡುವ ಜವಾಬ್ದಾರಿ ಹೊಂದಿರುತ್ತಾರೆ ಎಂದು ಹೇಳಿದೆ.

2010ರಿಂದಲೂ ಸುಪ್ರೀಂ ಕೋರ್ಟ್, ಲಿವಿಂಗ್ ಟುಗೆದರ್ ಸಂಬಂಧವನ್ನು ವೈವಾಹಿಕ ಸಂಬಂಧವೆಂದೇ ಕಾನೂನು ತಿಳಿಯುತ್ತದೆ ಎಂದು ಒತ್ತಿ ಹೇಳುತ್ತಾ ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com