
ನವದೆಹಲಿ: ಎಲ್ಲರಿಗೂ ಸಮಾನ ಇಂಟರ್ ನೆಟ್ ಬಳಕೆಯ ಚರ್ಚೆಯ ನಡುವೆ ಅಂತರ್ಜಾಲ ಮಾರಾಟ ಸಂಸ್ಥೆ ಫ್ಲಿಪ್ಕಾರ್ಟ್, ಟೆಲಿಕಾಮ್ ಸೇವೆಗಳ ಏರ್ಟೆಲ್ ಸಂಸ್ಥೆಯ ಜೊತೆ ಮಾತುಕತೆ ನಡೆಸಿದ್ದ ಏರ್ಟೆಲ್-ಜೀರೋ ಯೋಜನೆಯಿಂದ ಇಂದ ಹೊರನಡೆದಿದೆ.
"ಏರ್ಟೆಲ್ ಸಂಸ್ಥೆಯ ಏರ್ಟೆಲ್-ಜೀರೋ ವೇದಿಕೆಯಿಂದ ನಾನು ಹೊರನಡೆಯುತ್ತಿದ್ದೇವೆ. ನಾವು ಭಾರತದಲ್ಲಿ ಇಂಟರ್ ನೆಟ್ ತಾಟಸ್ಥ್ಯದ ಕೂಗಿಗೆ ಬೆಂಬಲ ನೀಡಲಿದ್ದೇವೆ" ಎಂದು ಸಂಸ್ಥೆಯ ವಕ್ತಾರ ತಿಳಿಸಿದ್ದಾರೆ. "ಇಂಟರ್ ನೆಟ್ ತಾಟಸ್ಥ್ಯದ ಸಮುದಾಯದ ಉತ್ಸಾಹದ ಜೊತೆ ನಾವು ಕೈಜೋಡಿಸಲಿದ್ದೇವೆ. ಯಾವುದೇ ಸೇವೆ ಕೊಡುವ, ಆ ಸೇವೆ ನಿಡುವ ಸಂಸ್ಥೆ ಎಷ್ಟೇ ದೊಡದಾಗಿದ್ದರೂ ತಾರತಮ್ಯ ಇರಬಾರದು ಎಂಬುದು ನಮ್ಮ ನಂಬಿಕೆ" ಎಂದು ವಕ್ತಾರ ತಿಳಿಸಿದ್ದಾರೆ.
ಇಂಟರ್ ನೆಟ್ ತಾಟಸ್ಥ್ಯ ಎಲ್ಲ ಆಪ್ ಗಳಿಗೂ ಸಮನಾದ ಪ್ರಾಶಸ್ತ್ಯ ನೀಡುತ್ತದೆ. ಸಂಸ್ಥೆ ನೀಡುವ ಶುಲ್ಕದ ಮೇಲೆ ಆಪ್ ಗಳಿಗೆ ಪ್ರಾಶಸ್ತ್ಯ ನೀಡುವುದು ಈ ತಾಟಸ್ಥ್ಯದ ಉಲ್ಲಂಘನೆ. ಏರ್ಟೆಲ್-ಜೀರೋದಲ್ಲಿ ಬಳಕೆದಾರರು ಉಚಿತವಾಗಿ ಆಪ್ ಗಳನ್ನು ಬಳಸಬಹುದಾದರೂ, ಆಪ್ ಗಳು ಇದಕ್ಕೆ ಶುಲ್ಕ ತೆತ್ತಬೇಕಾಗುತ್ತದೆ.
ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ಜನ ಇಂಟರ್ ನೆಟ್ ಬಳಕೆದಾರರಿ ಟಿ ಆರ್ ಐ ಎ ಗೆ ಬರೆದು ಇಂಟರ್ ನೆಟ್ ತಾಟಸ್ಥ್ಯಕ್ಕೆ ಬೇಡಿಕೆ ಇಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್ ಮತ್ತು ಫೇಸ್ಬುಕ್ ಕೂಡ ಟೆಲಿಕಾಮ್ ಸಂಸ್ಥೆಗಳಿಗೆ ಅಂತರ್ಜಾಲ ಸೇವೆಗಳಿಗೆ ಹೆಚ್ಚಿನ ಶುಲ್ಕ ಹಾಕಲು ಅವಕಾಶ ನೀಡದಂತೆ, ಅಥವಾ ಆಪ್ ಗಳ ಬಳಕೆಗೆ ಪ್ರಾಶಸ್ತ್ಯ ನೀಡದಂತೆ ಕಾನೂನು ಮಾಡಲು ಸರ್ಕಾರದ ಮೇಲೆ ಒತ್ತಡ ಹೇರಲು ಒತ್ತಾಯಿಸುತ್ತಿವೆ.
Advertisement