ಒರಿಸ್ಸಾ: ಪಂಚಾಯಿತಿ ಅಧ್ಯಕ್ಷ ಸೇರಿದಂತೆ ಏಳು ಜನರನ್ನು ಅಪಹರಿಸಿದ ಮಾವೋವಾದಿಗಳು

ಮಾಜಿ ಪಂಚಾಯಿತಿ ಅಧ್ಯಕ್ಷನನ್ನು ಒಳಗೊಂಡಂತೆ ಮಾವೋವಾದಿಗಳು ಏಳು ಗ್ರಾಮಸ್ಥರನ್ನು ಮಲ್ಕಂಗಿರಿ ಜಿಲ್ಲೆಯ
ಮಾವೋವಾದಿಗಳು (ಸಂಗ್ರಹ ಚಿತ್ರ)
ಮಾವೋವಾದಿಗಳು (ಸಂಗ್ರಹ ಚಿತ್ರ)

ಭುವನೇಶ್ವರ್/ಮಲ್ಕಂಗಿರಿ: ಮಾಜಿ ಪಂಚಾಯಿತಿ ಅಧ್ಯಕ್ಷನನ್ನು ಒಳಗೊಂಡಂತೆ ಮಾವೋವಾದಿಗಳು ಏಳು ಗ್ರಾಮಸ್ಥರನ್ನು ಮಲ್ಕಂಗಿರಿ ಜಿಲ್ಲೆಯ ಕರ್ತನ್ಪಲ್ಲಿ ಗ್ರಾಮದಿಂದ ಸೋಮವಾರ ಅಪಹರಣ ಮಾಡಿರುವ ಘಟನೆ ನಡೆದಿದೆ. ಚತ್ತೀಸ್ ಘರ್ ನಲ್ಲಿ ತೀವ್ರಗೊಂಡಿರುವ ಮಾವೋವಾದಿಗಳ ದಾಳಿಯ ಹಿನ್ನಲೆಯಲ್ಲಿ ಒರಿಸ್ಸಾದ ನಕ್ಸಲ್ ಪೀಡಿತ ಗ್ರಾಮಗಳಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಿದ್ದರು ಈ ಘಟನೆ ನಡಿದಿರುವುದು ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ.

೩ ಜನ ಮಹಿಳೆಯರೂ ಒಳಗೊಂಡ ಸಶಸ್ತ್ರಧಾರಿ ಬಂಡುಕೋರರು ಸೋಮವಾರ ಕರ್ತನ್ಪಲ್ಲಿ ಗ್ರಾಮವನ್ನು ಹೊಕ್ಕಿ ಗ್ರಾಮಸ್ಥರನ್ನು ಬೆದರಿಸಿ ಅಪಹರಿಸಿದ್ದಾರೆ.

ಈ ಬಂಡುಕೋರರು ಇನ್ನೂ ಯಾವುದೇ ಬೇಡಿಕೆಗಳನ್ನು ಇಟ್ಟಿಲ್ಲವಾದ್ದರಿಂದ ಈ ಅಪಹರಣದ ಕಾರಣ ಇನ್ನೂ ತಿಳಿದುಬಂದಿಲ್ಲ.

ಅಪಹರಣಗೊಂಡಿರುವವರು ಮಾಜಿ ಮತಿಲಿ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ತ್ರಿನಾಥ್ ಭೂಮಿಯಾ, ಮಂಗು ದುರುವಾ ಬರಹಾ, ಜಾಡುರಾಮ್ ಭೂಮಿಯಾ, ದಾಂಬು ಭೂಮಿಯಾ, ಸನ್ಯಾಸಿ ಭೂಮಿಯಾ, ಗಂಗಾ ಭೂಮಿಯಾ ಮತ್ತು ದಶರಥ್ ಭೂಮಿಯಾ.

ಅಪಹರಣಗೊಂಡ ಏಳು ಜನರಲ್ಲಿ ಕನಿಷ್ಟ ಮೂವರಿಗೆ ಮಾವೋವಾದಿಗಳ ಸಂಪರ್ಕ ಇತ್ತು ಎಂದು ಡಿಜಿಪಿ ಸಂಜೀವ್ ಮಾರಿಕ್ ತಿಳಿಸಿದ್ದಾರೆ. "ಅಪಹರಣಗೊಂಡ ಏಳು ಗ್ರಾಮಸ್ಥರಲ್ಲಿ ಕನಿಷ್ಠ ಮೂವರಿಗೆ ಮಾವೋವಾದಿಗಳ ಜೊತೆ ಸಂಪರ್ಕ ಇತ್ತು" ಎಂದು ಮಾರಿಕ್ ತಿಳಿಸಿದ್ದಾರೆ. ಶೋಧ ಕಾರ್ಯಾಚರಣೆ ಜಾರಿಯಲ್ಲಿದ್ದು, ಆರು ನಕ್ಸಲ್ ಪೀಡಿತ ಜಿಲ್ಲೆಗಳಲ್ಲಿ ಪೊಲೀಸರು ಕಟೆಚ್ಚರ ಘೋಷಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com