ಸಲ್ಮಾನ್ ಖಾನ್ ಹಿಟ್ & ರನ್ ಪ್ರಕರಣ: ಏಪ್ರಿಲ್ ೨೦ ರಂದು ತೀರ್ಪು ಸಾಧ್ಯತೆ

೨೦೦೨ ರ ಹಿಟ್ ಅಂಡ್ ರನ್ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ವಿವಿಧ ಕೇಸುಗಳಲ್ಲಿ ಕೋರ್ಟುಗಳನ್ನು
ಸಲ್ಮಾನ್ ಖಾನ್
ಸಲ್ಮಾನ್ ಖಾನ್

ನವದೆಹಲಿ: ೨೦೦೨ ರ ಹಿಟ್ ಅಂಡ್ ರನ್ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ವಿವಿಧ ಕೇಸುಗಳಲ್ಲಿ ಕೋರ್ಟುಗಳನ್ನು ಸುತ್ತುತ್ತಲೇ ಇದ್ದಾರೆ. ೧೩ ವರ್ಷದ ಈ ಪ್ರಕರಣ ಈ ತಿಂಗಳು ಅಂತ್ಯ ಕಾಣಲಿದೆ ಎನ್ನುತ್ತವೆ ವರದಿಗಳು.

೨೦೦೨ರ ಈ ಹಿಟ್ & ರನ್ ಪ್ರಕರಣದಲ್ಲಿ ಕೋರ್ಟ್ ಏಪ್ರಿಲ್ ೨೦ಕ್ಕೆ ತೀರ್ಪು ನೀಡಲಿದೆ ಎಂದು ತಿಳಿದುಬಂದಿದೆ.

ಹಿಂದಿನ ಮೆಜೆಸ್ಟ್ರೇಟ್, ನಟನ ವಿರುದ್ಧ ಆರೋಪಗಳನ್ನು ಹೆಚ್ಚಿಸಿದ್ದ ಹಿನ್ನಲೆಯಲ್ಲಿ ಸೆಷನ್ ನ್ಯಾಯಾಲಯ ಹೊಸದಾಗಿ ವಿಚಾರಣೆಗಳನ್ನು ಮಾಡಿತ್ತು.

ಆರೋಪಿಯ ಪರವಾಗಿ ವಾದ ಮಾಡಿದ್ದ ವಕೀಲ ಹಲವಾರು ವಾದಗಳನ್ನು ಮಂಡಿಸುತ್ತಲೇ ಬಂದಿದ್ದಾರೆ. ಮೊದಲು ಅದು ಅಪಘಾತ ಎಂದಿದ್ದರು, ನಂತರ ನಟನಿಗೆ ಅಂದು ಮೈನಲ್ಲಿ  ಹುಷಾರಿರಲಿಲ್ಲ, ಆದುದರಿಂದ ಸಲ್ಮಾನ್ ಅವರ ಚಾಲಕ ಕಾರು ನಡೆಸುತ್ತಿದ್ದ ಎಂದೂ ವಾದ ಮಾಡಿದ್ದಾರೆ. ಆದರೆ ಸರ್ಕಾರದ ಪ್ರಾಸೆಕ್ಯೂಟರ್ ಮೇಲಿನ ವಾದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ವಾದಿಸಿದ್ದಾರೆ.

ಭಾಂದ್ರಾದ ಹೊರವಲಯದಲ್ಲಿ ಅಡ್ಡಾದಿಡ್ಡಿ ಕಾರು ಓಡಿಸಿ ಒಬ್ಬನನ್ನು ಕೊಂದ ಮತ್ತು ನಾಲ್ವರನ್ನು ಗಾಯ ಮಾಡಿದ ಆರೋಪವನ್ನು ಸಲ್ಮಾನ್ ಖಾನ್ ಎದುರಿಸುತ್ತಿದ್ದು, ಆರೋಪ ಸಾಬೀತಾದರೆ ೧೦ ವರ್ಷದವರೆಗೂ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com