ಪತಿ ಸಲಿಂಗರತಿ: ಮನನೊಂದು ಫೇಸ್ಬುಕ್ ನಲ್ಲಿ ಟಿಪ್ಪಣಿ ಬರೆದು ವೈದ್ಯೆ ಆತ್ಮಹತ್ಯೆ

ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್) ನ ೩೧ ವರ್ಷದ ಮಹಿಳಾ ವೈದ್ಯೆಯೊಬ್ಬರು, ಅದೇ ಸಂಸ್ಥೆಯಲ್ಲಿ...
ಪ್ರಿಯಾ ವೇದಿ
ಪ್ರಿಯಾ ವೇದಿ

ನವದೆಹಲಿ: ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್) ನ ೩೧ ವರ್ಷದ ಮಹಿಳಾ ವೈದ್ಯೆಯೊಬ್ಬರು, ಅದೇ ಸಂಸ್ಥೆಯಲ್ಲಿ ವೈದ್ಯರಾಗಿದ್ದ ತಮ್ಮ ಪತಿಯ ಲೈಂಗಿಕ ಕೋನದಿಂದ ಅತೀವ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಈ ಸಂಗಾತಿ ಐದು ವರ್ಷದ ಕೆಳಗೆ ಮದುವೆಯಾಗಿದ್ದರು ಹಾಗು ದಕ್ಷಿಣ ದೆಹಲಿಯ ಎಐಐಎಂಎಸ್ ವಸತಿ ಸಮುಚ್ಛಯದಲ್ಲಿ ವಾಸಿಸುತ್ತಿದ್ದರು. ಮದುವೆಯ ನಂತರ ತನ್ನ ಪತಿ ಸಲಿಂಗರತಿ ಎಂದು ತಿಳಿದಿದ್ದಾರೆ. ಆದರೆ ಆತ್ಮಹತ್ಯೆಗೂ ಮೊದಲು ಬರೆದ ಪತ್ರದಲ್ಲಿ ಅವರು ಅದನ್ನು ಒಪ್ಪಿಕೊಂಡಿದ್ದರು ಆದರೆ ತಮ್ಮ ಪತಿಯು ನೀಡುತ್ತಿದ್ದ ಕಿರುಕುಳವನ್ನು ಸಹಿಸಲಾರದೆ ಈ ಕೊನೆಯ ನಡೆಯನ್ನು ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.

"ನೆನ್ನೆ ತಮ್ಮ ಪತಿಯ ಜೊತೆ ಜಗಳ ಮಾಡಿ ಪಹರ್ಘಂಜ್ ನ ಹೋಟೆಲೊಂದಕ್ಕೆ ಎಐಐಎಂಎಸ್ ವೈದ್ಯೆ ಪ್ರಿಯಾ ವೇದಿ ಹೋಗಿದ್ದರು. ಅಲ್ಲಿ ಅವರು ಕೈ ಕುಯ್ದುಕೊಂಡೂ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿವರವಾದ ಸಾವಿನ ಟಿಪ್ಪಣಿ ಅಲ್ಲಿ ಕಂಡಿಬಂದಿದ್ದು, ಅದನ್ನೇ ಅವರ ಫೇಸ್ಬುಕ್ ಪುಟದಲ್ಲೂ ಕೂಡ ಪೋಸ್ಟ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾವಿನ ಟಿಪ್ಪಣಿಯಲ್ಲಿ ವರದಕ್ಷಿಣೆಗಾಗಿ ಪತಿ ತಮ್ಮ ವಿರುದ್ಧ ಕಿರುಕುಳ ನೀಡುತ್ತಿದ್ದನ್ನೂ ತಿಳಿಸಿದ್ದಾರೆ.

ಈ ಹಿನ್ನಲೆಯಲ್ಲಿ ಪೊಲೀಸರು ಪ್ರಿಯಾ ಅವರ ಪತಿ ಕಮಲ್ ವೇದಿಯವರನ್ನು(೩೪) ಬಂಧಿಸಿದ್ದು, ಐಪಿಸಿ ಸೆಕ್ಷನ್ ೪೯೮ಎ(ಹಿಂಸೆ) ಮತ್ತು ೩೦೪ಬಿ(ವರದಕ್ಷಿಣೆ ಸಂಬಂಧಿತ ಪ್ರಕರಣಗಳ ವಿಚಾರಣೆ) ಇವುಗಳಡಿ ಕೇಸು ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com