ರಕ್ತಚಂದನ ಕಳ್ಳಸಾಗಾಣಿಕೆಯ ಸೂತ್ರದಾರರು ಟಿಡಿಪಿ ಪಕ್ಷದ ಆಪ್ತರು: ಪಿಎಂಕೆ ಆರೋಪ

ರಕ್ತಚಂದನ ಮರ ಕಳ್ಳಸಾಗಾಣಿಕೆಯ ಪ್ರಮುಖ ವ್ಯಕ್ತಿಗಳನ್ನು ರಕ್ಷಿಸಲು ತೆಲುಗು ದೇಶಂ ಪಕ್ಷ(ಟಿಡಿಪಿ), ಮರ ಕಡಿಯುವವರನ್ನು ಎನ್ಕೌಂಟರಿನಲ್ಲಿ
ಆಂಧ್ರ ಪೊಲೀಸರ ಎನ್ಕೌಂಟರ್ ವಿರುದ್ಧ ಪ್ರತಿಭಟನೆ
ಆಂಧ್ರ ಪೊಲೀಸರ ಎನ್ಕೌಂಟರ್ ವಿರುದ್ಧ ಪ್ರತಿಭಟನೆ

ಚೆನ್ನೈ: ರಕ್ತಚಂದನ ಮರ ಕಳ್ಳಸಾಗಾಣಿಕೆಯ ಪ್ರಮುಖ ವ್ಯಕ್ತಿಗಳನ್ನು ರಕ್ಷಿಸಲು ತೆಲುಗು ದೇಶಂ ಪಕ್ಷ(ಟಿಡಿಪಿ), ಮರ ಕಡಿಯುವವರನ್ನು ಎನ್ಕೌಂಟರಿನಲ್ಲಿ ಕೊಲ್ಲಲು ಆಂಧ್ರ ಪೊಲೀಸರಿಗೆ ಉತ್ತೇಜನ ನೀಡಿದೆ ಎಂದು ಪಟ್ಟಾಲಿ ಮಕ್ಕಳ ಕಾಟ್ಚಿ(ಪಿಎಂಕೆ) ಪಕ್ಷದ ಕಾನೂನು ಕಾರ್ಯದರ್ಶಿ ಭಾನುವಾರ ಆರೋಪಿಸಿದ್ದಾರೆ.

ರಕ್ತಚಂದನ ಕಳ್ಳಸಾಗಾಣಿಕೆಯಲ್ಲಿ ಸಂಬಂಧ ಇರುವ 'ಬುಲೆಟ್ ಸುರೇಶ ಇತ್ತೀಚೆಗೆ ಟಿಡಿಪಿ ಪಕ್ಷ ಸೇರಿದ್ದಾನೆ ಎಂದು ಪಿಎಂಕೆ ಲೋಕಸಭಾ ಸದಸ್ಯ ಬಾಲು ಆರೋಪಿಸಿದ್ದಾರೆ.

ಆಂಧ್ರ ಪೊಲೀಸರು ಇತ್ತೀಚಿಗೆ ನಡೆದ ಶೇಷಾಚಲಂ ಎನ್ಕೌಂಟರಿನಲ್ಲಿ ೨೦ ಜನ ಮರ ಕಡಿಯುವವರನ್ನು ಕೊಂದು ಹಾಕಿದ್ದರು. ಇದು ಹಲವಾರು ಪ್ರತಿಭಟನೆಗಳಿಗೆ ಎಡೆ ಮಾಡಿಕೊಟ್ಟದ್ದಲ್ಲದೆ ಇದು ನಕಲಿ ಎಂಕೌಂಟರ್ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಆರೋಪಿಸಿತ್ತು ಹಾಗೂ ಹೈದರಾಬಾದ್ ಹೈಕೋರ್ಟ್ ಪೊಲೀಸರ ವಿರುದ್ಧ ಕೇಸು ದಾಖಲಿಸುವಂತೆ ಸೂಚನೆ ನೀಡಿತ್ತು.

ಈ ಪ್ರಕರಣದಲ್ಲಿ ಹಲವಾರು ರಾಜಕಾರಣಿಗಳು ಮತ್ತು ಪೊಲೀಸರು ಭಾಗಿಯಾಗಿದ್ದಾರೆ ಎಂದು ಆರೋಪಿಸಿರುವ ಬಾಲು, ಸಿಬಿಐ ತನಿಖೆಗೆ ಆಗ್ರಹಿಸಿ ಹೈದರಾಬಾದ್ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com