
ನವದೆಹಲಿ: ತನ್ನ ಪತಿ ಸಲಿಂಗರತಿ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಎ ಐ ಐ ಎಂ ಎಸ್ ವೈದ್ಯೆಯ ಫೇಸ್ಬುಕ್ ಸಾವಿನ ಟಿಪ್ಪಣಿ, ೩೫೦೦ ಬಾರಿಗೆ ಬೇರೆ ಬೇರೆ ಜನ ಹಂಚಿಕೊಂಡಿದ್ದಾರೆ. ಈ ಸಾಮಾಜಿಕ ಜಾಲತಾಣದಲ್ಲಿ ಈ ವೈದ್ಯರ ಪುಟವನ್ನು ಶ್ರದ್ಧಾಂಜಲಿ ಪುಟವನ್ನಾಗಿ ಬದಲಯಿಸಲಾಗಿಯಿಸಲಾಗಿದ್ದರೂ ಈ ಹಂಚಿಕೆ ನಡೆಯುತ್ತಲೇ ಇದೆ .
ಪಹರ್ಘಂಜ್ ಹೋಟೆಲೊಂದರಲ್ಲಿ ಶನಿವಾರ ಮಧ್ಯಾಹ್ನ ಪ್ರಾಣ ಕಳೆದುಕೊಂಡಿದ್ದ ಎ ಐ ಐ ಎಂ ಎಸ್ ವೈದ್ಯೆ ಪ್ರಿಯಾ ವೇದಿ ಡೆತ್ ನೋಟ್ ಬರೆದಿಟ್ಟಿದ್ದರು. ಅದನ್ನೇ ತನ್ನ ಫೇಸ್ಬುಕ್ ಪುಟದಲ್ಲಿಯೂ ಬರೆದುಕೊಂಡಿದ್ದರು.
ಅಂದೆ ಸಂಜೆ ಅವರ ಫೇಸ್ಬುಕ್ ಪುಟವನ್ನು ಸುಮಾರು ೭:೩೦ ಕ್ಕೆ ಶ್ರದ್ಧಾಂಜಲಿ ಪುಟವನ್ನಾಗಿ ಪರಿವರ್ತಿಸಲಾಗಿತ್ತು. ಬಹುಷಃ ಪೊಲೀಸ್ ಮಾಹಿತಿ ತಂತ್ರಜ್ಞಾನ ತಂಡ, ಸಾಮಾಜಿಕ ಜಾಲತಾಣದ ಸಹಯೋಗದೊಂದಿದೆ 'ಪ್ರಿಯಾ ವೇದಿಯನ್ನು ನೆನೆಪಿಸಿಕೊಳ್ಳಲು" ಎಂದು ಬದಲಾಯಿಸಿಲಾಗಿತ್ತು ಹಾಗೂ ಸಾವಿನ ಟಿಪ್ಪಣಿಯನ್ನು ಅಳಿಸಿಹಾಕಲಾಗಿತ್ತು.
ಪ್ರಿಯಾ ವರ ಪತಿ ಕಮಲ್ ವೇದಿಯವರನ್ನು ೧೪ ದಿನಗಳ ನ್ಯಾಯಾಂಗ ಬಂಧನಕ್ಕೆ ವಶಪಡಿಸಿ ಪ್ರಾದೇಶಿಕ ನ್ಯಾಯಾಲಯ ಆದೇಶ ನೀಡಿದೆ. ಅವರನ್ನು ಆಸ್ಪತ್ರೆಯ ವಸತಿ ಸಮ್ಮುಚ್ಛಯದ ಮನೆಯಿಂದ ಬಂಧಿಸಲಾಗಿದೆ.
ಪೊಲೀಸರು ನೀಡಿರುವ ವರದಿಯ ಪ್ರಕಾರ ಐದು ವರ್ಷಗಳ ಹಿಂದೆ ಈ ಸಂಗಾತಿಗಳು ಮದುವೆಯಾಗಿದ್ದರು, ನಂತರ ತನ್ನ ಪತಿ ಸಲಿಂಗರತಿ ಎಂದು ಪ್ರಿಯಾಳಿಗೆ ತಿಳಿಯಿತು. ಆದರೆ ಸಾವಿನ ಟಿಪ್ಪಣಿಯಲ್ಲಿ ಬರೆದಿರುವಂತೆ ಈ ಅಂಶವನ್ನು ಪ್ರಿಯಾ ಒಪ್ಪಿಕೊಂಡಿದ್ದರು, ತನ್ನ ಪತಿ ಆಗಾಗ ನೀಡುತ್ತಿದ್ದ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.
Advertisement