
ನವದೆಹಲಿ: ಭೂಸ್ವಾಧೀನ ಸುಗ್ರೀವಾಜ್ಞೆಯ ಬಗ್ಗೆ ಕಾಂಗ್ರೆಸ್ ಜನರಿಗೆ ತಪ್ಪು ಮಾಹಿತಿ ಹರಡುತ್ತಿದೆ ಎಂದು ದೂರಿರುವ ಬಿಜೆಪಿ ಪಕ್ಷ, ಈ ಕಾಯ್ದೆಯ ವಿರುದ್ಧದ ಕಾಂಗ್ರೆಸ್ ಟೀಕೆ 'ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ' ಎಂದು ಕುಹಕವಾಡಿದೆ.
ಹಿಂದಿನ ಕಾಂಗ್ರೆಸ್ ಆಡಳಿತದ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಪಕ್ಷ ಈ ಹಿಂದೆ ಕಾಂಗ್ರೆಸ್ ಹಲವಾರು ಸುಗ್ರೀವಾಜ್ಞೆಗಳನ್ನು ಜಾರಿಗೆ ತಂದಿದೆ, ಆಗ ವಿರೋಧ ಪಕ್ಷಗಳಿಗೆ "ಪ್ರಜಾಪ್ರಭುತ್ವದ ಕಗ್ಗೊಲೆ' ಎಂದು ಕರೆಯುವ ಹಕ್ಕು ವಿರೋಧಪಕ್ಷಗಳಿಗಿರಲಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ಆಡಳಿತದಲ್ಲಿ ಈ ಹಿಂದೆ ಹೊರಡಿಸಿರುವ ಕಾಯ್ದೆಗಳ ಬಗ್ಗೆ ತರಾಟೆಗೆ ತೆಗೆದುಕೊಳ್ಳುವಂತೆ ಬಿಜೆಪಿ ಪಕ್ಷ ಸದಸ್ಯರಿಗೆ ಕರೆಕೊಟ್ಟಿದೆ.
"ಕಾಂಗ್ರೆಸ್ ಪಕ್ಷ ಸುಗ್ರೀವಾಜ್ಞೆಯನ್ನು ವಿರೋಧಿಸುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ. ಅವರ ಆಡಳಿತದ ಸಮಯದಲ್ಲಿ ೪೫೬ ಸುಗ್ರೀವಾಜ್ಞೆಗಳನ್ನು ಹೊರಡಿಸಿದ್ದಾರೆ" ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಜವಹರಲಾಲ್ ನೆಹರೂ ಸಮಯದಲ್ಲಿ ೭೭ ಸುಗ್ರೀವಾಜ್ಞೆಗಳು, ಇಂದಿರಾ ಗಾಂಧಿ ಅವರ ಆರು ವರ್ಷಗಳ ಆಡಳಿತದ ಸಮಯದಲ್ಲಿ ೭೭ ಸುಗ್ರೀವಾಜ್ಞೆಗಳನ್ನು, ನಂತರ ಅವರ ಆಡಳಿತದಲ್ಲೇ ಪ್ರತಿ ತಿಂಗಳಿಗೆ ೩ ಸುಗ್ರೀವಾಜ್ಞೆಗಳು, ರಾಜೀವ ಗಾಂಧಿ ಆಡಳಿತದಲ್ಲಿ ೩೫ ಸುಗ್ರೀವಾಜ್ಞೆಗಳನ್ನು ಹೊರಡಿಸಿದ್ದಾರೆ ಎಂದು ಅವರು ದೂರಿದ್ದಾರೆ.
Advertisement