ರೋಬೋಟುಗಳಾಗಬೇಡಿ; ಕುಟುಂಬದ ಜೊತೆ ಗುಣಮಟ್ಟದ ಸಮಯ ಕಳೆಯಿರಿ

ರೋಬೋಟುಗಳಂತೆ ಜೀವನ ನಡೆಸದೆ ತಮ್ಮ ಕುಟುಂಬ ಸದಸ್ಯರ ಜೊತೆ ಗುಣಮಟ್ಟದ ಸಮಯ ಕಳೆಯುವಂತೆ ಅಧಿಕಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ರೋಬೋಟುಗಳಂತೆ ಜೀವನ ನಡೆಸದೆ ತಮ್ಮ ಕುಟುಂಬ ಸದಸ್ಯರ ಜೊತೆ ಗುಣಮಟ್ಟದ ಸಮಯ ಕಳೆಯುವಂತೆ ಅಧಿಕಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.

"ನೀವು ಸಮಯ ನಿರ್ವಹಣೆಯಲ್ಲಿ ಜಾಣರು ಆದರೆ ನಿಮ್ಮ ಕುಟುಂಬದ ಜೊತೆ ಗುಣಮಟ್ಟದ ಸಮಯ ಕಳೆಯುತ್ತೀರಾ? ಇದರ ಬಗ್ಗೆ ಚಿಂತಿಸಿ" ಎಂದು ಮೋದಿ ಹೇಳಿದ್ದಾರೆ.

ಅಧಿಕಾರಿಗಳಿಗೆ ನಿಮ್ಮ ಜೀವ ರೋಬೋಟ್ ರೀತಿ ಆಗಿಬಿಟ್ಟಿದೆಯೇ ಎಂದು ಒಮ್ಮೆ ಯೋಚಿಸಿ ನೋಡಿ ಎಂದಿರುವ ಅವರು "ಹಾಗೇನಾದರೂ ಆಗಿದ್ದರೆ ಇದು ಸರ್ಕಾರ ಮತ್ತು ವ್ಯವಸ್ಥೆಗೆ ಪೆಟ್ಟು ನೀಡುತ್ತದೆ. ನಾವು ರೋಬೋಟ್ ಗಳ ತರಹ ಇರಲು ಸಾಧ್ಯವಿಲ್ಲ. ಅದು ನಮ್ಮ ಜೀವನವಾಗಲು ಸಾಧ್ಯವಿಲ್ಲ" ಎಂದು ವಿಜ್ಞಾನ ಭವನದಲ್ಲಿ ನಡೆದ ೯ ನೆ ನಾಗರಿಕ ಸೇವಾ ದಿನದ ಅಂಗವಾಗಿ ಸಾರ್ವಜನಿಕ ಅಧಿಕಾರಿಗಳ ಜೊತೆಗಿನ ಸಂವಾದದಲ್ಲಿ ಹೇಳಿದ್ದಾರೆ.

"ನಿಮ್ಮ ಜೀವನ ಕಡತದಂತೆ ಆಗಬಾರದು. ಸರ್ಕಾರ ಇದ್ದಲ್ಲಿ ಕಡತಗಳಿರುತ್ತವೆ. ಅದಕ್ಕೆ ಬದಲಾವಣೆಯಿಲ್ಲ. ಆ ಕಡತ ನಿಮ್ಮ ಎರಡನೆ ಅರ್ಧಾಂಗಿಯಿದ್ದಂತೆ. ನಿಮ್ಮ ಜೀವನದ ಬಗ್ಗೆ ಚಿಂತಿಸದೆ ಹೋದರೆ ಕಡತಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತೀರಿ" ಎಂದಿದ್ದಾರೆ ಪ್ರಧಾನಿ.

"ನೀವು ಸಾಕಷ್ಟು ಓದುತ್ತೀರಿ. ವಿಶ್ವದ ಅತ್ಯುತ್ತಮ ಜನರು ಬರೆದ ಪುಸ್ತಕಗಳನ್ನು ನೀವು ಓದಿರುತ್ತೀರಿ. ನೀವು ಈ ಸ್ವಭಾವದವರಾಗಿದ್ದರಿಂದಲೇ ಇಲ್ಲಿ ನೆರೆದಿರುವುದು. 'ಯೂನಿಯನ್ ಬಾಜಿ' ನಡೆಸುವವರು ಇಲ್ಲಿಗೆ ಬರುವುದಿಲ್ಲ. ಅಸಂಖ್ಯಾತ ಪುಸ್ತಕಗಳಲ್ಲಿ ಕಳೆದುಹೋಗುವವರೇ ಇಲ್ಲಿಗೆ ಬರುವುದು" ಎಂದು ಕರಾಡತನದ ನಡುವೆ ಮೋದಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com