
ನವದೆಹಲಿ: ಕಾಯಕಯೋಗಿ ಬಸವೇಶ್ವರ ಜಯಂತಿ ಅಂಗವಾಗಿ ಬಸವೇಶ್ವರರ ಭಾವಚಿತ್ರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕರ್ನಾಟಕದ ಕೇಂದ್ರ ಸಚಿವರ ನೇತೃತ್ವದ ಸಂಸದರ ನಿಯೋಗವು ಸಲ್ಲಿಸಿತು.
ಸಂಸತ್ ಆವರಣದಲ್ಲಿರುವ ಬಸವೇಶ್ವರ ಪ್ರತಿಮೆಗೆ ಕೇಂದ್ರ ರಸಾಯನ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್, ಕಾನೂನು ಸಚಿವ ಸದಾನಂದಗೌಡ, ಮಧ್ಯಮ ಕೈಗಾರಿಕೆ ಸಚಿವ ಜಿ.ಎಂ.ಸಿದ್ದೇಶ್ವರ ಅವರು ಮಾಲಾರ್ರ್ಪಣೆ ಮಾಡಿ ಗೌರವ ಸಲ್ಲಿಸಿದರು.
ನಿಯೋಗದಲ್ಲಿ ಸಂಸದರಾದ ಬಿ.ಎಸ್.ಯಡಿಯೂರಪ್ಪ, ಪ್ರಹ್ಲಾದ ಜೋಶಿ, ಪ್ರತಾಪ್ ಸಿಂಹ, ಪಿ.ಸಿ.ಗದ್ದಿಗೌಡರು, ನಳಿನ ಕುಮಾರ್ ಕಟೀಲ್, ಶಿವಕುಮಾರ್ ಉದಾಸಿ, ಶೋಭಾ ಕರಂದ್ಲಾಜೆ, ಸಂಗಣ್ಣ ಕರಡಿ, ಪಿ.ಸಿ ಮೋಹನ್, ಸುರೇಶ್ ಅಂಗಡಿ ಭಾಗವಹಿಸಿದ್ದರು.
ತಲೆಬಾಗಿ ನಮಿಸುತ್ತೇನೆ: ಕಾಯಕ ಯೋಗಿ ಬಸವಣ್ಣನವರಿಗೆ ನಾನು ತಲೆಬಾಗಿ ನಮಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಬಸವ ಜಯಂತಿ ಅಂಗವಾಗಿ ಶುಭ ಕೋರಿರುವ ಪ್ರಧಾನಿ, ಸಮಾಜ ಸುಧಾರಣೆ ಮತ್ತು ಸೇವೆಗಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟ ಬಸವಣ್ಣನವರಿಗೆ ಬಸವ ಜಯಂತಿಯಂದು ನಾನು ತಲೆಬಾಗಿ ನಮಿಸುತ್ತೇನೆ. ಅವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತ ಎಂದು ಹೇಳಿದ್ದಾರೆ.
Advertisement