ನೇಪಾಳದಲ್ಲಿ ಮಹಾ ಭೂಕಂಪ: ಸಾವಿನ ಸಂಖ್ಯೆ 2000 ಏರಿಕೆ

ಮತ್ತೆ ಭೂತಾಯಿಯ ಮುನಿಸಿನ ದರ್ಶನವಾಗಿದೆ. ಭೂಮಿಯ ಭೀಕರ ಕಂಪನಕ್ಕೆ ನಾಲ್ಕು ರಾಷ್ಟ್ರಗಳು ತತ್ತರಿಸಿವೆ. ಶನಿವಾರ ನೇಪಾಳದ ಫೋಖ್ರಾದಲ್ಲಿ ಸಂಭವಿಸಿದ...
ಭೂಕಂಪದಿಂದಾಗಿ ಅವಶೇಷಗಳಡಿಯಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ
ಭೂಕಂಪದಿಂದಾಗಿ ಅವಶೇಷಗಳಡಿಯಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ

ಕಠ್ಮಂಡು/ನವದೆಹಲಿ: ಮತ್ತೆ ಭೂತಾಯಿಯ ಮುನಿಸಿನ ದರ್ಶನವಾಗಿದೆ. ಭೂಮಿಯ ಭೀಕರ ಕಂಪನಕ್ಕೆ ನಾಲ್ಕು ರಾಷ್ಟ್ರಗಳು ತತ್ತರಿಸಿವೆ. ಶನಿವಾರ ನೇಪಾಳದ ಫೋಖ್ರಾದಲ್ಲಿ ಸಂಭವಿಸಿದ ಮಹಾಭೂಕಂಪನದಲ್ಲಿ ಮೃತಪಟ್ಟವರ ಸಂಖ್ಯೆ 2000ಕ್ಕೆ ಏರಿಕೆಯಾಗಿದೆ.

ಬರೋಬ್ಬರಿ 81 ವರ್ಷಗಳ ಬಳಿಕ ಆದ ಅತ್ಯಂತ ಭೀಕರ ಭೂಕಂಪ ಇದಾಗಿದೆ. ಶನಿವಾರ ಬೆಳಗ್ಗೆ 11.56 (ಸ್ಥಳೀಯ ಕಾಲಮಾನ)ರ ವೇಳೆಗೆ ಫೋಖ್ರಾದಲ್ಲಿ 7.9 ತೀವ್ರತೆಯಲ್ಲಿ ಭೂಮಿಯು ಕಂಪಿಸಿದ್ದು, ಇತಿಹಾಸವೇ ಧರೆಗುರುಳಿದರೆ, ಎವರೆಸ್ಟ್‍ಗೆ ಎವರೆಸ್ಟ್‍ನಂತಹ ಪರ್ವತವೇ ನಡುಗಿಹೋಗಿದೆ. ಈ ದುರಂತವು 60 ಲಕ್ಷಕ್ಕೂ ಅಧಿಕ ಮಂದಿಯ ಮೇಲೆ ಪರಿಣಾಮ ಬೀರಿದೆ.

ಮೊದಲು 7.8 ರ ತೀವ್ರತೆ ಹಾಗೂ 15 ಕಿ.ಮೀ. ಆಳದಲ್ಲಿ ಆರಂಭವಾದ ಭೂಕಂಪ ಕಠ್ಮಂಡುವಿನ ಎಲ್ಲ ದಿಕ್ಕುಗಳತ್ತಲೂ ಅಂದರೆ ಉತ್ತರದಲ್ಲಿ ಹಿಮಾಲಯ ಮತ್ತು ಟಿಬೆಟ್, ದಕ್ಷಿಣದಲ್ಲಿ ಗಂಗಾ ನದಿ ಮುಖ ಭೂಮಿ, ಪೂರ್ವದಲ್ಲಿ ಬ್ರಹ್ಮಪುತ್ರ ಮತ್ತು ಪಶ್ಚಿಮದಲ್ಲಿ ಪಾಕಿಸ್ತಾನದ ಲಾಹೋರ್ ನಗರದತ್ತ ವ್ಯಾಪಿಸಿತು.

ಇದಾದ ಒಂದೇ ಗಂಟೆಯಲ್ಲಿ 24ರಷ್ಟು ಪಶ್ಚಾತ್ ಕಂಪನಗಳು ಸಂಭವಿಸಿದವು. ಇದರ ತೀವ್ರತೆಗೆ ಮನೆಗಳು, ಕಟ್ಟಡಗಳು, ಪುರಾತನ ದೇಗುಲಗಳು ಧರೆಗುರುಳಿದವು, ರಸ್ತೆ, ಗೋಡೆಗಳಲ್ಲಿ ಬಿರುಕುಗಳು ಮೂಡಿದವು, ನೇಪಾಳದಲ್ಲಿ 19ನೇ ಶತಮಾನದ ಐತಿಹಾಸಿಕ ಧರಾಹರಾ ಗೋಪುರ ನೆಲಸಮವಾಯಿತು.

ತೀವ್ರತೆಯ ಆಧಾರದಲ್ಲಿ ಈ ಭೂಕಂಪವನ್ನು `ಗ್ರೇಟ್ ಅರ್ತ್‍ಕ್ವೇಕ್' ಎಂದು ವರ್ಗೀಕರಿಸಲಾಗಿದೆ. ಮುಂದಿನ 10-15 ದಿನಗಳ ಕಾಲ ಇದೇ ಪ್ರದೇಶಗಳಲ್ಲಿ ಪಶ್ಚಾತ್ ಕಂಪನಗಳು ಮುಂದುವರಿಯ ಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಭಾರತದಲ್ಲಿ 36 ಸಾವು: ಕಠ್ಮಂಡುವಿನ ವಾಯವ್ಯದಲ್ಲಿರುವ ಲ್ಯಾಮ್ಜಂಗ್ ಪ್ರದೇಶವೇ ಭೂಕಂಪದ ಕೇಂದ್ರಬಿಂದು.

ಕಂಪನದ ಪ್ರಭಾವ ಭಾರತದ ಬಿಹಾರ, ಪಶ್ಚಿಮಬಂಗಾಳ, ಉತ್ತರ ಪ್ರದೇಶ, ಕರ್ನಾಟಕದ ಹಲವು ಪ್ರದೇಶಗಳ ಮೇಲೂ ಬಿದ್ದಿದ್ದು 36ಕ್ಕೂ ಹೆಚ್ಚು ಮಂದಿ ಮೃತಪ ಟ್ಟಿದ್ದಾರೆ. ಚೀನಾ, ಭೂತಾನ್, ಪಾಕ್, ಬಾಂಗ್ಲಾದಲ್ಲೂ ಭೂಮಿ ಕಂಪಿಸಿ ಹಲವರು ಅಸುನೀಗಿ ದ್ದಾರೆ. ಮೌಂಟ್ ಎವರೆಸ್ಟ್‍ನಲ್ಲಿ ಹಿಮಪಾತ ಸಂಭವಿಸಿ 18 ಪರ್ವತಾರೋಹಿಗಳು ಸಾವಿಗೀಡಾಗಿದ್ದಾರೆ. ಇದೇ ವೇಳೆ, ನೇಪಾಳದಲ್ಲಿ ಇಬ್ಬರು ಭಾರತೀಯರು ಮೃತಪಟ್ಟಿರುವುದು ದೃಢಪಟ್ಟಿದೆ. 56 ಭಾರತೀಯರನ್ನು ರಕ್ಷಿಸಲಾಗಿದೆ.

ಸಹಾಯವಾಣಿ ವಿದೇಶಾಂಗ ಇಲಾಖೆಯು ಆರಂಭಿಸಿರುವ 24 ಗಂಟೆಯ ಸಹಾಯವಾಣಿ ಸಂಖ್ಯೆಗಳು
ದೆಹಲಿ
+91 11 23012113
+91 11 23014104
+91 11 2307905
ಕಠ್ಮಂಡು
+977 9851107021
+977 9851135141
ಇ-ಮೇಲ್:
controlroom@mea.gov.in
ಎಲ್ಲಿ? ನೇಪಾಳದ ಫೋಖ್ರಾ
ಕೇಂದ್ರಬಿಂದು: ಕಠ್ಮಂಡುವಿನಿಂದ 80 ಕಿ.ಮೀ. ದೂರದ ವಾಯವ್ಯದಲ್ಲಿರುವ ಲ್ಯಾಮ್ಜಂಗ್
ಯಾವಾಗ?: ಬೆಳಗ್ಗೆ 11.56 (ಸ್ಥಳೀಯ ಕಾಲceನ)
ಮೃತರ ಸಂಖ್ಯೆ: 1500ಕ್ಕೂ ಅಧಿಕ ತೀವ್ರತೆ: 7.9
ಪಶ್ಚಾತ್ ಕಂಪನಗಳು: 24 (5ರಿಂದ 6.6 ತೀವ್ರತೆ)
ಎಲ್ಲೆಲ್ಲಿ?: ನೇಪಾಳ, ಭಾರತ, ಬಾಂಗ್ಲಾದೇಶ, ಚೀನಾ ಮತ್ತು ಪಾಕಿಸ್ತಾನದ ಹಲವೆಡೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com