ಸಣ್ಣಪುಟ್ಟ ಗಾಯಗಳಿಗೆ ೯೬ ಘಂಟೆಗಳ ಕಾಲ ಆಸ್ಪತ್ರೆ ಸೇರಿದ್ದ ಆಂಧ್ರ ಎನ್ಕೌಂಟರ್ ಪೊಲೀಸರು

ರಕ್ತಚಂದನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ೨೦ ಜನ ಮರ ಕಡಿಯುವವರನ್ನು ಎನ್ಕೌಂಟರ್ ನಲ್ಲಿ ಕೊಂದ ಪೊಲೀಸರಿಗೆ ಆಗಿದ್ದ ಗಾಯಗಳು ಅತಿ ಸಣ್ಣ ಪುಟ್ಟವು
ಶೇಷಾಚಲಂ ಎನ್ಕೌಂಟರ್ ದೃಶ್ಯ
ಶೇಷಾಚಲಂ ಎನ್ಕೌಂಟರ್ ದೃಶ್ಯ

ತಿರುಪತಿ: ರಕ್ತಚಂದನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ೨೦ ಜನ ಮರ ಕಡಿಯುವವರನ್ನು ಎನ್ಕೌಂಟರ್ ನಲ್ಲಿ ಕೊಂದ ಪೊಲೀಸರಿಗೆ ಆಗಿದ್ದ ಗಾಯಗಳು ಅತಿ ಸಣ್ಣ ಪುಟ್ಟವು ಎಂದು ತಿಳಿದುಬಂದಿದ್ದು ಎಸ್ ವಿ ಆರ್-ಆರ್ ಯು ಐ ಎ ಸರ್ಕಾರಿ ಆಸ್ಪತ್ರೆಗೆ ದಾಖಲಾಗುವ ಪ್ರಮೇಯವೇ ಇರಲಿಲ್ಲ ಎಂದು ತಿಳಿದುಬಂದಿದೆ.

ಈ ಪೋಲಿಸರನ್ನು ಉಪಚರಿಸಿದ ವೈದ್ಯರೊಬ್ಬರ ಪ್ರಕಾರ ಪೊಲೀಸರಿಗೆ ಆಗಿದ್ದ ಗಾಯಗಳು ಅತೀ ಸಣ್ಣ ಪುಟ್ಟ ರೀತಿಯವು ಆದರೂ ಅವರು ೯೬ ಘಂಟೆಗಳ ಕಾಲ ದಾಖಲಾಗಿದ್ದರು. "ಅವರ ಸ್ಥಿತಿ ಯಾವುದೇ ರೀತಿಯಲ್ಲಿ ಗಂಭೀರವಾಗಿಲ್ಲದೇ ಇದ್ದರು ನಾವು ಅವರನ್ನು ಸುಮ್ಮನೆ ಪರಿವೀಕ್ಷಣೆಯಲ್ಲಿ ಇಟ್ಟಿದ್ದೆವು" ಎಂದಿದ್ದಾರೆ.

ಆದರೆ ಎನ್ಕೌಂಟರ್ ನಡೆದ ದಿನ ಆರ್ ಯು ಐ ಎ ಸರ್ಕಾರಿ ಆಸ್ಪತ್ರೆಯ ಹೊರರೋಗಿಗಳ ವಿಭಾಗ ಗಾಯಗೊಂಡ ಕಾರ್ಯಾಚರಣೆ ಪಡೆಯ ಪೊಲೀಸರಿಂದಲೇ ತುಂಬಿತ್ತು.

ಪೊಲೀಸರ ಕಥೆಯ ಪ್ರಕಾರ ಕಾರ್ಯಾಚರಣೆಯ ವೇಳೆಯಲ್ಲಿ ಮರಗಳ್ಳರು ದಾಳಿ ಮಾಡಿದರಿಂದ ಪೊಲೀಸರಿಗೆ ತೀವ್ರವಾಗಿ ಗಾಯಗಳಾಗಿದ್ದವು ಆದುದರಿಂದ ಪ್ರತಿಯಾಗಿ ದಾಳಿ ನಡೆಸಿ ಮರಗಳ್ಳರನ್ನು ಎನ್ಕೌಂಟರ್ ನಲ್ಲಿ ಕೊಂದಿದ್ದೆವು ಎಂದು ತಿಳಿಸಿದ್ದರು.

ವೈದ್ಯರ ಪ್ರಕಾರ ಸಣ್ಣಪುಟ್ಟ ಗಾಯಗಳಿಗೆ ಕೆಲವು ಆಂಟಿಬಯೋಟಿಕ್ ಮಾತ್ರೆಗಳನ್ನು ಕೊಡಲಾಗಿದೆ. ಯಾವುದೇ ರೀತಿಯ ಗಂಭೀರ ಅಥವಾ ತೀವ್ರ ಗಾಯಗಳನ್ನು ವೈದ್ಯರು ಅಲ್ಲಗೆಳೆದಿದ್ದಾರೆ.

ಈಗಾಗಲೇ ಈ ಎನ್ಕೌಂಟರ್ ಪೋಲೀಸರ ವಿರುದ್ಧ ಕೇಸು ದಾಖಲಿಸುವಂತೆ ಹೈದರಾಬಾದ್ ಕೋರ್ಟ್ ಆದೇಶ ನೀಡಿದ್ದು, ತನಿಖೆ ಪ್ರಗತಿಯಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com