೮೯೭೫ ಎನ್ ಜಿ ಒ ಗಳ ಪರವಾನಗಿ ರದ್ದುಪಡಿಸಿದ ಗೃಹಸಚಿವಾಲಯ

ಗ್ರೀನ್ ಪೀಸ್ ಫೌಂಡೇಶನ್ ಸಂಸ್ಥೆಯ ಪರವಾನಗಿ ರದ್ದುಮಾಡಿದ ಕೆಲವೇ ದಿನಗಳಲ್ಲಿ ಕೇಂದ್ರ ಗೃಹ ಸಚಿವಾಲಯ ವಿದೇಶಿ ವಂತಿಗೆ ನಿಯಂತ್ರಣಾ ಕಾಯ್ದೆಯಡಿ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಗ್ರೀನ್ ಪೀಸ್ ಫೌಂಡೇಶನ್ ಸಂಸ್ಥೆಯ ಪರವಾನಗಿ ರದ್ದುಮಾಡಿದ ಕೆಲವೇ ದಿನಗಳಲ್ಲಿ ಕೇಂದ್ರ ಗೃಹ ಸಚಿವಾಲಯ ವಿದೇಶಿ ವಂತಿಗೆ ನಿಯಂತ್ರಣಾ ಕಾಯ್ದೆಯಡಿ ೮೯೭೫ ಸರ್ಕಾರೇತರ ಸಂಸ್ಥೆಗಳ (ಎನ್ ಜಿ ಒ) ಪರವಾನಗಿ ರದ್ದುಪಡಿಸಿದೆ.

೨೦೦೯-೨೦೧೦, ೨೦೧೦-೨೦೧೧ ಮತ್ತು ೨೦೧೧-೨೦೧೨ ರ ಸಮಯದಲ್ಲಿ ಈ ಸಂಸ್ಥೆಗಳು ಕಡ್ಡಾಯ ವಾರ್ಷಿಕ ಆದಾಯ ಅರ್ಜಿ ಎಫ್ ಸಿ-೬ ಸಲ್ಲಿಸಿಲ್ಲ ಎಂದು ದೂರಿ ಗೃಹ ಸಚಿವಾಲಯ ಈ ಸಂಸ್ಥೆಗಳ ಪರವಾನಗಿ ರದ್ದುಪಡಿಸಿದೆ.

ಕಳೆದ ಅಕ್ಟೋಬರ್ ನಲ್ಲಿ ರೆಟರ್ನ್ಸ್ ಅರ್ಜಿ ಸಲ್ಲಿಸಿದ್ದಕ್ಕೆ ಸ್ಪಷ್ಟನೆ ಕೋರಿ ಸಚಿವಾಲಯ ಈ ಸಂಸ್ಥೆಗಳಿಗೆ ನೋಟಿಸ್ ನೀಡಿತ್ತು. "೧೦೩೪೩ ಸಂಸ್ಥೆಗಳಿಗೆ ನೀಡಿದ್ದ ನೋಟಿಸ್ ಗಳಲ್ಲಿ ಕೇಳ್ವಲ ೨೨೯ ಸಂಸ್ಥೆಗಳು ಉತ್ತರ ನೀಡಿದ್ದು, ಉಳಿದ ಸಂಸ್ಥೆಗಳಿಂದ ಯಾವುದೇ ಉತ್ತರ ಬಂದಿಲ್ಲವಾದ್ದರಿಂದ ಆ ಸಂಸ್ಥೆಗಳನ್ನು ಪರಿಶೀಲನೆಗೆ ಒಡ್ಡಲಾಗಿದೆ" ಎಂದು ಸಚಿವಾಲಯ ತಿಳಿಸಿದೆ.

ವಿದೇಶಿ ಹಣ ಸ್ವೀಕರಿಸುವ ಎನ್ ಜಿ ಒ ಗಳು ವಿದೇಶಿ ವಂತಿಗೆ ನಿಯಂತ್ರಣಾ ಕಾಯ್ದೆಯಡಿ ನೊಂದಣಿ ಮಾಡಿಸಿಕೊಂಡಿರುವುದರಿಂದ ತಮ್ಮ ವಾರ್ಷಿಕ ವರದಿಯನ್ನು ಎಫ್ ಸಿ -೬ ಅರ್ಜಿಯ ಮೂಲಕ ಸಲ್ಲಿಸಬೇಕು. ಇದರ ಜೊತೆಗೆ ವಿತ್ತೀಯ ವರ್ಷ ಕಳೆದ ೯ ತಿಂಗಳೊಳಗೆ ಆದಾಯ ಮತ್ತು ಖರ್ಚಿನ ವರದಿಯನ್ನು ಸಲ್ಲಿಸಬೇಕು.

ವಿದೇಶಿ ವಂತಿಗೆ ನಿಯಂತ್ರಣಾ ಕಾಯ್ದೆಯಡಿ ನೀಡಿದ ಪರವಾನಗಿಯನ್ನು ರದ್ದುಪಡಿಸಿರುವ ಸಂಸ್ಥೆಗಳು ದೆಹಲಿ, ಮುಂಬೈ ಮತ್ತು ಆಂಧ್ರಪ್ರದೇಶಕ್ಕೆ ಸೇರಿದ್ದವು ಹಾಗೂ ೫೧೦ ಷೋ ಕಾಸ್ ನೋಟಿಸ್ ಗಳು ಹಿಂದಿರುಗಿವೆ ಎಂದು ಸಚಿವಾಲಯ ತಿಳಿಸಿದೆ.

ಮಾರ್ಚ್ ೧ ರಂದು ಗೃಹಸಚಿವಾಲಯ ಆಂದ್ರಪ್ರದೇಶದ ೧೧೪೨ ಎನ್ ಜಿ ಒ ಗಳು ನೋಟಿಸ್ ಗೆ ಉತ್ತರ ನೀಡಲು ಸಫಲವಾಗದೆ ಹೋದದ್ದರಿಂದ ಪರವಾನಡಿ ರದ್ದುಪಡಿಸಿತ್ತು.

ಈ ತಿಂಗಳ ಮೊದಲಭಾಗದಲ್ಲಿ ಗ್ರೀನ್ ಪೀಸ್ ಇಂಡಿಯಾ ಸಂಸ್ಥೆಯ ಪರವಾನಗಿ ರದ್ದುಮಾಡಿ, ಅದರ ಬ್ಯಾಂಕ್ ಖಾತೆಗಳನ್ನೆಲ್ಲಾ ವಶಪಡಿಸಿಕೊಂಡಿತ್ತು. ವಿದೇಶಿ ಹಣವನ್ನು ದುರ್ಬಳಕೆ ಮಾಡಿ ದೇಶದ ಸಾರ್ವಜನಿಕ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಹಾಳುಗೆಡವುತ್ತಿರುವ ಆರೋಪವನ್ನು ಈ ಸಂಸ್ಥೆಯ ಮೇಲೆ ಹೇರಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com