
ಖಟ್ಮಂಡು: ಶನಿವಾರದ ಭಯಾನಕ ಭೂಕಂಪನ ನೇಪಾಳವನ್ನು ಅಲುಗಾಡಿಸಿ ೪೦೦೦ಕ್ಕು ಹೆಚ್ಚು ಜನರನ್ನು ಬಲಿ ತೆಗೆದುಕೊಂಡು ಎರಡು ದಿನ ಕಳೆದಿದ್ದರು ಹಲವು ಜನರು ಇನ್ನು ಹೊರಗೇ ಉಳಿಯಬೇಕಿದ್ದು ನೀರು ಮತ್ತು ಆಹಾರದ ಕೊರತೆಯಿಂದ ಜನರು ಇನ್ನು ಹೆಚ್ಚು ಬಳಲುವಂತೆ ಮಾಡಿದೆ.
ಭಾರತದ ಕಡೆಯಿಂದ ಪರಿಹಾರ ಕಾರ್ಯಾಚರಣೆಯ ಮೇಲ್ವಿಚಾರಣೆಯನ್ನು ಪ್ರಧಾನಿ ನರೇಂದ್ರ ಮೋದಿಯವರೇ ವಹಿಸಿದ್ದರು, ನೇಪಾಳದ ಮುಖ್ಯಮಂತ್ರಿ ಸುಶೀಲ್ ಕೊಯಿರಾಲ ಕಾರ್ಯಾಚರಣೆ ಪರಿಣಾಮಕಾರಿಯಾಗಿ ನಡೆದಿಲ್ಲ ಎಂದು ಒಪ್ಪಿಕೊಂಡಿದ್ದಾರೆ.
ರಿಕ್ಟರ್ ಮಾಪನದಲ್ಲಿ ೭.೯ಕ್ಕೂ ಹೆಚ್ಚಿನ ಈ ಭೂಕಂಪನದಿಮ್ದ ೪೦೦೦ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದ್ದು ೬೫೦೦ ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಪರಿಹಾರ ಸಾಮಗ್ರಿ ಪರಿಣಾಮಕಾರಿಯಾಗಿ ಜರನ್ನು ತಲುಪಲು ವಿಫಲವಾಗಿದ್ದು ಇದು ಜನರಲ್ಲಿ ಆಕ್ರೋಶವನ್ನುಂಟುಮಾಡಿದೆ. ಮೂಲ ಸೌಕರ್ಯಗಳ ಕೊರತೆ ಹಾಗೂ ವಿಪತ್ತುಗಳನ್ನು ನಿರ್ವಹಿಸಲು ತಜ್ಞರ ಕೊರತೆಯನ್ನು ಕೊಯಿರಾಲ ದೂರಿದ್ದಾರೆ.
"ರಕ್ಷಣೆ, ಶೋಧ ಮತ್ತು ಪರಿಹಾರ ಕಾರ್ಯಾಚರಣೆಗಳು ಪರಿಣಾಮಕಾರಿಯಾಗಿಲ್ಲ" ಎಂದಿರುವ ಕೊಯಿರಾಲ. ವಿಪತ್ತು ನಿರ್ವಹಣೆ ಮಾಡುವ ಸಂಸ್ಥೆಗಳನ್ನು ನಾವು ಹುಟ್ಟುಹಾಕದೇ ಇದ್ದದ್ದು ಕೂಡ ಇದಕ್ಕೆ ಕಾರಣ ಎಂದಿದ್ದಾರೆ.
ಭಾರತದಿಂದ ನೀರು, ಆಹಾರ, ಹೊದಿಗೆ ಆರೋಗ್ಯ ಸಾಮಗ್ರಿಗಳನ್ನು ನೇಪಾಳಕ್ಕೆ ಕಳುಹಿಸಲಾಗುತ್ತಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಎಸ್ ಜೈಶಂಕರ್ ತಿಳಿಸಿದ್ದಾರೆ.
Advertisement