ಪರಮಾಣು ವಿದ್ಯುಚ್ಛಕ್ತಿ ಯೋಜನೆಗಳಿಗೆ ೧೦ ಪ್ರದೇಶಗಳನ್ನು ಅನುಮೋದಿಸಿದ ಸರ್ಕಾರ

ಹೊಸ ಪರಮಾಣು ವಿದ್ಯುಚ್ಛಕ್ತಿ ಘಟಕಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ೧೦ ಜಾಗಗಳಿಗೆ ಅನುಮೋದನೆ ನೀಡಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಹೊಸ ಪರಮಾಣು ವಿದ್ಯುಚ್ಛಕ್ತಿ ಘಟಕಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ೧೦ ಜಾಗಗಳಿಗೆ ಅನುಮೋದನೆ ನೀಡಿದೆ ಎಂದು ಸಂಸತ್ತಿನಲ್ಲಿ ಬುಧವಾರ ತಿಳಿಸಿದೆ.

೯ ರಾಜ್ಯಗಳಲ್ಲಿ ೧೦ ಜಾಗಗಳ ಪಟ್ಟಿ ತಿಳಿಸಿದ ಪ್ರಧಾನ ಮಂತ್ರಿ ಕಾರ್ಯಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್ "ಭಾರತೀಯ ತಂತ್ರಜ್ಞಾನ ಮತ್ತು ವಿದೇಶಿ ಸಹಯೋಗದೊಂದಿಗೆ ಮುಂದೆ ನಿರ್ಮಾಣವಾಗಲಿರುವ ಪರಮಾಣು ವಿದ್ಯುಚ್ಛಕ್ತಿ ಯೋಜನೆಗಳಿಗೆ ಸಾಮಾನ್ಯ ನಿಯಮದ ಪ್ರಕಾರ ಸರ್ಕಾರ ೧೦ ಜಾಗಗಳನ್ನು ಗುರುತಿಸಿದೆ" ಎಂದು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಹರ್ಯಾಣದ ಫತೇಬಾದಿನ ಗೋರಕ್ ಪುರದಲ್ಲಿ, ಮಧ್ಯಪ್ರದೇಶದ ಭೀಮಾಪುರ, ಕರ್ನಾಟಕದ ಕೈಗಾ ಮತ್ತು ರಾಜಸ್ಥಾನ ಮಹಿ ಬಂಸ್ವಾರದಲ್ಲಿ ಭಾರತಿಯ ತಂತ್ರಜ್ಞಾದ ಪರಮಾಣು ಸ್ಥಾವರಗಳನ್ನು ನಿರ್ಮಿಸಲಾಗುವುದು.

ವಿದೇಶಿ ಸಹಯೋಗದ ಪರಮಾಣು ಸ್ಥಾವರಗಳನ್ನು ತಮಿಳುನಾಡಿನ ಕೂಡಂಕೂಲಮ್, ಮಹಾರಾಷ್ಟ್ರದ ಜೈತ್ಪುರ್, ಗುಜರಾತಿನ ಚಯ್ಯ ಮಿತಿ ವಿರ್ಧಿ, ಆಂಧ್ರಪ್ರದೇಶದ ಕೋವಾದ ಮತ್ತು ಪಶ್ಚಿಮ ಬಂಗಾಳದ ಹರಿಪುರದಲ್ಲಿ ನಿರ್ಮಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com