ಅಮಾನತಿನ ವಿರುದ್ಧ ಸಂಸತ್ತಿನ ಗಾಂಧಿ ಪ್ರತಿಮೆಯ ಎದುರು ಕಾಂಗ್ರೆಸ್ ಸಂಸದರ ಪ್ರತಿಭಟನೆ

ಲೋಕಸಭಾ ಸ್ಪೀಕರ್ ಸುಮಿತ್ರ ಮಹಾಜನ್ ಅವರು ತಮ್ಮ ಪಕ್ಷದ ಸದಸ್ಯರನ್ನು ಅಮಾನತು ಮಾಡಿದ್ದನ್ನು ವಿರೋಧಿಸಿ ಪ್ರತಿಭಟಿಸಲು ಕಾಂಗ್ರೆಸ್ ಪಕ್ಷದ ಸದಸ್ಯರು ಸಂಸತ್
ಅಮಾನತ್ತಿನ ವಿರುದ್ಧ ಪ್ರತಿಭಟನಾ ನಿರತ ಕಾಂಗ್ರೆಸ್ ಸದಸ್ಯರು
ಅಮಾನತ್ತಿನ ವಿರುದ್ಧ ಪ್ರತಿಭಟನಾ ನಿರತ ಕಾಂಗ್ರೆಸ್ ಸದಸ್ಯರು

ನವದೆಹಲಿ: ಲೋಕಸಭಾ ಸ್ಪೀಕರ್ ಸುಮಿತ್ರ ಮಹಾಜನ್ ಅವರು ತಮ್ಮ ಪಕ್ಷದ ಸದಸ್ಯರನ್ನು ಅಮಾನತು ಮಾಡಿದ್ದನ್ನು ವಿರೋಧಿಸಿ ಪ್ರತಿಭಟಿಸಲು ಕಾಂಗ್ರೆಸ್ ಪಕ್ಷದ ಸದಸ್ಯರು ಸಂಸತ್ ಆವರಣದ ಗಾಂಧಿ ಪ್ರತಿಮೆಯ ಬಳಿ ಸೇರಿದ್ದಾರೆ.

ಈ ಪ್ರತಿಭಟನೆಗಳಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಸೇರಿಕೊಂಡಿದ್ದಾರೆ. ಪ್ರತಿಭಟನೆಯ ಸಾಂಕೇತಿಕವಾಗಿ ಭುಜಕ್ಕೆ ಕಪ್ಪು ಪಟ್ಟಿ ಧರಿಸಿದ್ದಾರೆ.

ಈ ಪ್ರತಿಭಟನೆಗೆ ಬೆಂಬಲ ನೀಡಿ ತೃಣಮೂಲ ಕಾಂಗ್ರೆಸ್, ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಮತ್ತು ಇತರ ಪಕ್ಷದ ಸಂಸದರು ಕೂಡ ಗಾಂಧಿ ಪ್ರತಿಮೆಯ ಬಳಿ ಸೇರಲಿದ್ದಾರೆ.

ತಮ್ಮ ಪಕ್ಷದ ಸಂಸದರು ಶುಕ್ರವಾರದವರೆಗೆ ಸಂಸತ್ ಪ್ರವೇಶಿಸುವುದಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಈ ಹಿಂದೆ ತಿಳಿಸಿತ್ತು.

ಕಾಂಗ್ರೆಸ್ ಸಂಸದರ ಅಮಾನತ್ತಿನ ವಿರುದ್ಧದ ಪ್ರತಿಭಟನೆಗೆ ಸಹಕಾರ ತೋರಿರುವ ಎಎಪಿ ಪಕ್ಷದ ಮುಖಂಡ ಭಾಗವತ್ ಮನ್ ಕೂಡ ಅವರ ಪಕ್ಷದ ಸದಸ್ಯರು ಸಂಸತ್ ಕಲಾಪದಲ್ಲಿ ಭಾಗಿಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಈ ಮಧ್ಯೆ ಭಾರತೀಯ ಜನತಾ ಪಕ್ಷದ ಸಂಸದೀಯ ಸಭೆ ಸಂಸ್ತತ್ತಿನಲ್ಲಿ ಬೆಳಗ್ಗೆ ೯:೩೦ಕ್ಕೆ ಪ್ರಾರಂಭವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com