
ಕಾನ್ಪುರ: ವಕೀಲರ ಸಂಘದ ಚುನಾವಣೆ ನಡೆಯುವುದಕ್ಕೂ ಎರಡು ದಿನಗಳ ಮುಂಚಿತವಾಗಿ ಕ್ಷಣಗಳ ಅಂತರದಲ್ಲಿ ಜಿಲ್ಲ ನ್ಯಾಯಾಲಯದಲ್ಲಿ ಇಂದು ಎರಡು ಸ್ಫೋಟಗಳು ಸಂಭವಿಸಿದ್ದು ಈ ಘಟನೆಯಲ್ಲಿ ಸಾವು ನೋವಿನ ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸುಮಾರು ಮಧ್ಯಾಹ್ನ ೧ ಘಂಟೆಗೆ ಕೆಲವೇ ಕ್ಷಣಗಳ ಅಂತರದಲ್ಲಿ ನ್ಯಾಯಾಲಯದ ಆವರಣದಲ್ಲಿ ಎರಡು ಸ್ಫೋಟ ಸಂಭವಿಸಿವೆ ಎಂದು ಹಿರಿಯ ಪೋಲಿಸ್ ಮಹಾನಿರ್ದೇಶಕ ಶಲಭ್ ಮಾಥೇರ್ ತಿಳಿಸಿದ್ದಾರೆ.
ಪಟಾಕಿ ಬಾಂಬುಗಳನ್ನು ತಯಾರಿಸಲು ಬಳಸುವ ದಾರಗಳು ಮತ್ತು ಇತರ ವಸ್ತುಗಳನ್ನು ಸ್ಥಳದಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಘಟಿಸಿದಾಕ್ಷಣ ಕೂಡಲೆ ಸ್ನಿಫರ್ ನಾಯಿಗಳು ಮತ್ತು ವಿಧಿವಿಜ್ಞಾನ ಪರೀಕ್ಷೆಯ ದಳ ಸ್ಥಳಕ್ಕೆ ಧಾವಿಸಿದೆ. ಕೋರ್ಟ್ ಆವರಣವನ್ನು ತಪಾಸಣೆಗೆ ಒಳಪಡಿಸಲಾಗಿದೆ.
ಇದು ಯಾರೋ ಕಿಡಿಗೇಡಿಯ ಕೆಲಸ. ಚುನಾವಣೆಗಳು ಇನ್ನೆರಡು ದಿನದಲ್ಲಿ ನಡೆಯಬೇಕಿರುವುದರಿಂದ ಭಯಭೀತಿ ಸೃಷ್ಟಿಸಲು ಈ ರೀತಿಯ ಪಟಾಕಿಗಳನ್ನು ಸಿಡಿಸಿದ್ದಾನೆ ಎಂದು ಅವರು ತಿಳಿಸಿದ್ದಾರೆ.
Advertisement