
ನವದೆಹಲಿ: ಕಳೆದ ವರ್ಷ ೫೬೦೦ ಕ್ಕಿಂತಲೂ ಹೆಚ್ಚು ರೈತ್ಯರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಹರಿಭಾಯಿ ಪರಥಿಭಾಯಿ ಚೌಧರಿ ಬುಧವಾರ ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ಸಿಪಿಐ(ಮಾರ್ಕ್ಸಿಸ್ಟ್) ಪಕ್ಷದ ಸದಸ್ಯ ಸಿ ಪಿ ನಾಯಾಯಣನ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ೨೦೧೪ರಲ್ಲಿ ೧,೩೧,೬೬೬ ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
"ಇವುರಲ್ಲಿ ೫೬೫೦ ರೈತರು, ೨೦೧೪೮ ಗೃಹಿಣಿಯರು, ೮೦೬೮ ವಿದ್ಯಾರ್ಥಿಗಳು, ೨೩೦೮ ಸಾಲಬಾಧಿತ ಜನರು ಹಾಗೂ ೭೧೦೪ ಮಾನಸಿಕ ಅಸ್ವಸ್ಥರು" ಎಂದು ವಿವರ ನೀಡಿದ್ದಾರೆ.
ಮಾನಸಿಕ ಖಿನ್ನತೆ, ಸೀಜೋಫ್ರೀನಿಯಾ, ಕುಡಿತದ ಚಟ, ಇತ್ಯಾದಿ ಮಾನಸಿಕ ತೊಂದರೆಗಳು ಈ ಆತ್ಮಹತ್ಯೆಗೆ ಎಡೆ ಮಾಡಿಕೊಟ್ಟಿವೆ ಎಂದು ಅವರು ತಿಳಿಸಿದ್ದಾರೆ.
Advertisement