
ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿದ್ದ ಪ್ರಕರಣದ 6ನೇ ಆರೋಪಿ ವಿ.ಭಾಸ್ಕರ್ ಅಲಿಯಾಸ್ 420 ಭಾಸ್ಕರ್‌ನನ್ನು ಆಗಸ್ಟ್ 17ರವರೆಗೆ ವಿಶೇಷ ತನಿಖಾ ತಂಡ(ಎಸ್‌ಐಟಿ)ದ ವಶಕ್ಕೆ ನೀಡಲಾಗಿದೆ.
ನಿನ್ನೆ ನಗರದ ಐಷಾರಾಮಿ ಹೋಟೆಲ್‌ವೊಂದರಲ್ಲಿ ತಂಗಿದ್ದ ಭಾಸ್ಕರ್‌ನನ್ನು ಬಂಧಿಸಿದ್ದ ಎಸ್‌ಐಟಿ ಅಧಿಕಾರಿಗಳು, ಇಂದು ಆರೋಪಿಯನ್ನು ಲೋಕಾಯುಕ್ತ ವಿಶೇಷ ಕೋರ್ಟ್‌ಗೆ ಹಾಜರು ಪಡಿಸಿದರು.
ಆರೋಪಿ ಭಾಸ್ಕರ್ ಬಳಿ ಸಾಕಷ್ಟು ಮಾಹಿತಿ ಇದ್ದು, ಆತನನ್ನು ಕೂಲಂಕಷ ತನಿಖೆಗೆ ಒಳಪಡಿಸಬೇಕಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆತ ಹಲವು ಸಿಮ್ ಬಳಸಿದ್ದಾನೆ. ಈ ಎಲ್ಲದರ ತನಿಖೆಗಾಗಿ ಆರೋಪಿಯನ್ನು 14 ದಿನಗಳ ಕಾಲ ಎಸ್‌ಐಟಿ ವಶಕ್ಕೆ ನೀಡಬೇಕು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಜನಾರ್ದನ್ ಅವರು ಮನವಿ ಮಾಡಿದರು. ಮನವಿಯನ್ನು ಪುರಸ್ಕರಿಸಿದ ಕೋರ್ಟ್, ಭಾಸ್ಕರ್‌ನನ್ನು ಆಗಸ್ಟ್ 17ರವರೆಗೆ ಎಸ್‌ಐಟಿ ವಶಕ್ಕೆ ನೀಡಿದೆ.
420 ತಂಗಿದ್ದ ರೂಮ್ ಬಾಡಿಗೆ ದಿನಕ್ಕೆ 30 ಸಾವಿರ ರು.
ಲೋಕಾಯುಕ್ತ ಕಚೇರಿ ಲಂಚ ಪ್ರಕರಣದ ಪ್ರಮುಖ ಕಿಂಗ್‌ಪಿನ್ ನ್ಯಾ.ಭಾಸ್ಕರ್ ರಾವ್ ಅವರ ಪುತ್ರ ಅಶ್ವಿನ್ ರಾವ್ ಅವರ ಬಲಗೈ ಬಂಟ ಎಂದು ಹೇಳಿಕೊಂಡು ಓಡಾಡುತ್ತಿದ್ದ, ಸರ್ಕಾರಿ ಅಧಿಕಾರಿಗಳ ಸುಲಿಗೆ ಮಾಡಿದ ಆರೋಪ ಎದುರಿಸುತ್ತಿರುವ 420 ಭಾಸ್ಕರ್ ಕಳೆದ ಒಂದು ವಾರದಿಂದ ನಗರದ ಪ್ರತಿಷ್ಠಿತ ಹೋಟೆಲ್ ಲಿ ಮೆರಿಡಿಯನ್‌ನಲ್ಲಿ ಅಡಗಿ ಕುಳಿತಿದ್ದ. ಮಾಹಿತಿ ಪಡೆದ ಎಸ್‌ಐಟಿ ಅಧಿಕಾರಿಗಳು ನಿನ್ನೆ 420ಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಆರೋಪಿ ತಾನು ವಾಸವಿದ್ದ ರೂಮ್‌ಗೆ ಪ್ರತಿ ದಿನ 30 ಸಾವಿರ ರುಪಾಯಿ ಬಾಡಿಗೆ ಪಾವತಿಸುತ್ತಿದ್ದ ಎನ್ನಲಾಗಿದೆ.
Advertisement